ಮನೆ ಮದ್ದು ತಯಾರಿಸುವ ವಿಧಾನ:
ಮೊದಲನೆಯದಾಗಿ ಒಳ್ಳೆಯ ಕೊತ್ತಂಬರಿ ಸೊಪ್ಪನ್ನು ತೊಳೆದು ಕತ್ತರಿಸಿ, ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸ್ವಲ್ಪಹೊತ್ತು ನೆನೆಸಿಡಬೇಕು. ನಂತರ ಕೆಲವು ನಿಮಿಷಗಳ ಕಾಲ ಕುದಿಸಬೇಕು.ಕುದಿಸಿದ ನಂತರ ಪಾತ್ರೆಯನ್ನು ಸ್ಟೌ ನಿಂದ ಕೆಳಗಿಳಿಸಿ, ಮುಚ್ಚಳದಿಂದ ಮುಚ್ಚಿ ಸ್ವಲ್ಪ ಹೊತ್ತು ಆರಲು ಬಿಡಬೇಕು. ಅದು ತಣ್ಣಗಾದ ಮೇಲೆ ,ಒಂದು ಶುಭ್ರವಾದ ಬಟ್ಟೆಯಿಂದ ಸೋಸಿಕೊಂಡು,ಫ್ರಿಡ್ಜ್ ನಲ್ಲಿಟ್ಟುಕೊಳ್ಳಬೇಕು.
ದಿನಕ್ಕೆ ಒಂದು ಲೋಟದಂತೆ ,ತಿಂಗಳಲ್ಲಿ ಎರಡು ಬಾರಿ ಈ ಕಷಾಯವನ್ನು ಸೇವಿಸಬೇಕು. ಇದನ್ನು ಕುಡಿದ ನಂತರ, ಶರೀರದಲ್ಲಿರುವ ಕಲ್ಮಶಗಳು ಹೊರಹೋಗುವುದರಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಈ ಕಷಾಯದ ಒಟ್ಟಿಗೆ ಪ್ರತಿ ದಿನವೂ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಅಧಿಕ ಲಾಭವಾಗುತ್ತದೆ.
ಪ್ರಾಯದ ಹುಡುಗಿಯರು ಹಾಗು ಮಹಿಳೆಯರಿಗೆ ಋತು ಸಮಯದಲ್ಲಿ ಉಂಟಾಗುವ ನೋವುಗಳನ್ನು ಈ ಕಷಾಯ ನಿವಾರಿಸುತ್ತದೆ.
ಆದರೆ ಕಿಡ್ನಿ ಸ್ಟೋನ್ ಇರುವವರು ಈ ಕಷಾಯವನ್ನು ಸೇವಿಸಬಾರದು. ಏಕೆಂದರೆ ಈ ಕಷಾಯವನ್ನು ಸೇವಿಸುವುದರಿಂದ ಇತರೆ ಸಮಸ್ಯೆಗಳು ಬರಬಹುದು ಹಾಗು ಗರ್ಭಿಣಿ ಹೆಂಗಸರು ಈ ಕಷಾಯವನ್ನು ಸೇವಿಸಬೇಕಾದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ