ಕೊರೋನಾದಿಂದಾಗಿ ಸಂಕಷ್ಟಕ್ಕೀಡಾದ ತನ್ನ ನೌಕರರಿಗೆ ನಟ ಪ್ರಕಾಶ್ ರೈ ಮಾಡಿದ್ದೇನು ಗೊತ್ತಾ?

ಮಂಗಳವಾರ, 24 ಮಾರ್ಚ್ 2020 (09:40 IST)
ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಕೊರೋನಾದಿಂದಾಗಿ  ಹಣಕಾಸಿನ ತೊಂದರೆಗೀಡಾಗದಂತೆ ತಮ್ಮ ನೌಕರರಿಗೆ ಮೇವರೆಗಿನ ವೇತನವನ್ನು ಈಗಾಗಲೇ ನೀಡಿದ್ದಾರಂತೆ.


ಕೊರೋನಾದಿಂದ ಕೆಲಸಗಳಿಗೆ ಬ್ರೇಕ್ ನೀಡಲಾಗಿದೆ. ಆದರೆ ದುಡ್ಡಿಲ್ಲದೇ ಕೆಳ ಹಂತದ ನೌಕರರು ಕಷ್ಟಪಡುತ್ತಿದ್ದಾರೆ. ಹೀಗಾಗಿ ಇವರಿಗೆ ಮಾನವೀಯತೆಯ ದೃಷ್ಟಿಯಿಂದ ಮೊದಲೇ ವೇತನ ನೀಡಿ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ ಪ್ರಕಾಶ್ ರೈ.

ನನ್ನ ಪ್ರೊಡಕ್ಷನ್ ಹೌಸ್, ಫೌಂಡೇಶನ್, ವೈಯಕ್ತಿಕ ಸಿಬ್ಬಂದಿಗಳಿಗೆ ಮೂರು ತಿಂಗಳ ವೇತನ ನೀಡಿದ್ದೇನೆ. ನನ್ನ ಕೈಲಾದರೆ ಇದಕ್ಕಿಂತಲೂ ಹೆಚ್ಚು ದಿನಗಳ ವೇತನವನ್ನೂ ನೀಡಲಿದ್ದೇನೆ ಎಂದು ಪ್ರಕಾಶ್ ರೈ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ