ಬಿಬಿಕೆ9: ಕನ್ನಡ ಪರ ಹೋರಾಟಗಾರರ ಕ್ಷಮೆ ಯಾಚಿಸಿದ ಪ್ರಶಾಂತ್ ಸಂಬರಗಿ

ಶನಿವಾರ, 5 ನವೆಂಬರ್ 2022 (09:46 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ ಸ್ಪರ್ಧಿಯಾಗಿರುವ ಪ್ರಶಾಂತ್ ಸಂಬರಗಿ ಕನ್ನಡ ಪರ ಹೋರಾಟಗಾರರ ಕ್ಷಮೆ ಯಾಚಿಸಿದ್ದಾರೆ.

ಮೊನ್ನೆ ಮನೆಯಲ್ಲಿ ನಡೆದ ವಾಗ್ವಾದದ ವೇಳೆ ಕನ್ನಡ ಹೋರಾಟಗಾರರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಇದರ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸ್ವತಃ ಬಿಗ್ ಬಾಸ್ ಪ್ರಶಾಂತ್ ಗೆ ಕ್ಷಮೆ ಯಾಚಿಸಲು ಸೂಚಿಸಿದ್ದಾರೆ.

ಅದರಂತೆ ಪ್ರಶಾಂತ್ ಕನ್ ಫೆಷನ್ ರೂಂಗೆ ಬಂದು ಕ್ಷಮೆ ಯಾಚಿಸಿದ್ದಾರೆ. ನಾನು ಯಾವುದೇ ಕನ್ನಡ ಪರ ಹೋರಾಟಗಾರರಿಗೆ ನೋವು ಉಂಟು ಮಾಡುವ ಉದ್ದೇಶದಿಂದ ಆ ರೀತಿ ಹೇಳಿಲ್ಲ. ಕನ್ನಡ ಪರ ಹೋರಾಟಗಾರರ ಮೇಲೆ ನನಗೆ ಪ್ರೀತಿಯಿದೆ. ನೋವಾಗಿದ್ದರೆ ಹೇಳಿಕೆ ಹಿಂಪಡೆಯುತ್ತೇನೆ ಎಂದು ಪ್ರಶಾಂತ್ ಕಣ್ಣೀರು ಹಾಕಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ