ಬಿಬಿಕೆ9: ರೂಪೇಶ್ ರಾಜಣ್ಣಗೆ ಕಿವಿ ಕೇಳಿಸಲ್ಲ!

ಗುರುವಾರ, 27 ಅಕ್ಟೋಬರ್ 2022 (09:55 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಯಾಗಿರುವ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಬಗ್ಗೆ ಈಗ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.

ನಿನ್ನೆ ಮನೆಯಲ್ಲಿ ಪ್ರಶಾಂತ್ ಸಂಬರಗಿ ಈ ವಿಚಾರವನ್ನು ಹೊರಹಾಕಿದ್ದಾರೆ.  ರೂಪೇಶ್ ರಾಜಣ್ಣಗೆ ಒಂದು ಕಿವಿ ಕೇಳಿಸಲ್ಲ. ಅದಕ್ಕೇ ಕೆಲವು ಸಂವಹನ ಕೊರತೆಯಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ದಿವ್ಯಾ ಉರುಡುಗ ಬಳಿ ಹೇಳಿದ್ದಾರೆ. ಆದರೆ ಇದನ್ನು ನಂಬದ ದಿವ್ಯಾ ಸುಳ್ಳು ಹೇಳಬೇಡಿ ಎಂದಿದ್ದಾರೆ. ಅದಕ್ಕೆ ಪ್ರಶಾಂತ್ ಬೇಕಿದ್ದರೆ ನಾನು ಇದನ್ನು ಪ್ರೂವ್ ಮಾಡ್ತೀನಿ ಎಂದರು.

ಬಳಿಕ ದಿವ್ಯಾ ನೇರವಾಗಿ ರೂಪೇಶ್ ಬಳಿ ಹೋಗಿ ಇದು ನಿಜವಾ ಎಂದು ಕೇಳಿದ್ದಾರೆ. ಇದಕ್ಕೆ ರಾಜಣ್ಣ ಹೌದು ನನಗೆ ಒಂದು ಕಿವಿ ಬಾಲ್ಯದಿಂದಲೂ ಸಮಸ್ಯೆಯಿದೆ. ಹಾಗಂತ ಕೇಳುವುದಕ್ಕೆ ಸಮಸ್ಯೆಯಿಲ್ಲ ಎಂದಿದ್ದಾರೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ