ಕೇರಳ ಸಂತ್ರಸ್ತರಿಗೆ ನೆರವು ನೀಡಿದ ಪುನೀತ್ ರಾಜ್ ಕುಮಾರ್

ಬುಧವಾರ, 15 ಆಗಸ್ಟ್ 2018 (09:45 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಮಾತ್ರ ಹೀರೋ ಎನಿಸಿಕೊಳ್ಳದೆ, ರಿಯಲ್ ಲೈಫ್ ನಲ್ಲಿಯೂ ಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಸಹಾಯ ಹಸ್ತ ನೀಡುವುದರ ಮೂಲಕ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.  


ಹೌದು. ಕೇರಳದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಪ್ರವಾಹ ಉಂಟಾಗಿದ್ದು, ಹಲವಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಪ್ರವಾಹದಿಂದಾಗಿ ಕೇರಳದಲ್ಲಿ ಅನೇಕರು ಮೃತಪಟ್ಟಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಕೇರಳದಲ್ಲಿ ಮಳೆಯಿಂದ ಉಂಟಾಗಿರುವಈ ಹಾನಿಯನ್ನು ಕಂಡು ಪುನೀತ್ ಅವರ ಹೃದಯ ಮಿಡಿದಿದೆ.


 ಇದೀಗ ಪುನೀತ್ ಅವರು  ಕೇರಳದ ಮಹಾಮಳೆಗೆ ನಲುಗಿದ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಅದಕ್ಕಾಗಿ ಧನ ಸಹಾಯ ಮಾಡಿದ್ದಾರೆ. 5 ಲಕ್ಷ ನೆರವನ್ನ ನೀಡುವ ಮೂಲಕ ಪಕ್ಕದ‌ ರಾಜ್ಯದ ನೆರ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ