ಪುನೀತ್ ರಾಜ್ ಕುಮಾರ್ ಅಗಲಿ 11 ತಿಂಗಳು: ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ
ಗುರುವಾರ, 29 ಸೆಪ್ಟಂಬರ್ 2022 (17:07 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಆಗಲೇ 11 ತಿಂಗಳೇ ಕಳೆದುಹೋಗಿದೆ.
ಈ ಹಿನ್ನಲೆಯಲ್ಲಿ ಇಂದು ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿತು. ಈ ವೇಳೆ ಅಶ್ವಿನಿ ಪುನೀತ್, ರಾಘವೇಂದ್ರ ರಾಜ್ ಕುಮಾರ್, ಯುವ ರಾಜ್ ಕುಮಾರ್, ವಿಜಯ್ ರಾಘವೇಂದ್ರ, ಪುನೀತ್ ಸಹೋದರಿ ಪೂರ್ಣಿಮಾ ಸೇರಿದಂತೆ ಇಡೀ ಕುಟುಂಬಸ್ಥರು ಹಾಜರಿದ್ದರು.
ಇನ್ನು ಸಮಾಧಿಗೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆಯೂ ಇಂದು ಹೆಚ್ಚಾಗಿತ್ತು. ಮುಂದಿನ ತಿಂಗಳು 29 ಕ್ಕೆ ಅಪ್ಪು ಅಗಲಿ ಒಂದು ವರ್ಷವಾಗಲಿದೆ.