ಪುನೀತ್ ರಾಜ್ ಕುಮಾರ್ ಸಾಹಸದ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ

ಶನಿವಾರ, 19 ಅಕ್ಟೋಬರ್ 2019 (08:46 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಕೇವಲ ಹೆಸರಿಗಷ್ಟೇ ಅಲ್ಲ. ನಿಜವಾಗಿಯೂ ಅವರು ಒಂದು ರೀತಿಯಲ್ಲಿ ಪವರ್ ಮ್ಯಾನ್. ತಮ್ಮ ಫಿಟ್ ನೆಸ್ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ.


ಅದನ್ನು ಅವರು ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. ಇದೀಗ ಪುನೀತ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಕಂಬ ಏರಿ ತಾವೆಷ್ಟು ಫಿಟ್ ಎಂದು ಪ್ರೂವ್ ಮಾಡಿದ್ದಾರೆ. ಪುನೀತ್ ಸಾಹಸದ ವಿಡಿಯೋ ನೋಡಿ ಅಭಿಮಾನಿಗಳು ಫಿಟ್ ನೆಸ್ ನಲ್ಲಿ ಪವರ್ ಸ್ಟಾರ್ ಮೀರುವವರು ಯಾರೂ ಇಲ್ಲ ಎಂದು ಕೊಂಡಾಡಿದ್ದಾರೆ.

ಇನ್ನು, ದುಬೈಗೆ ತೆರಳಿರುವ ಪುನೀತ್ ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿಯವರ ಪಟ್ಲ ಸಂಭ್ರಮದ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ