ಮತ್ತೆ ಶೂಟಿಂಗ್ ಗೆ ಪುನೀತ್ ರಾಜಕುಮಾರ್

ಸೋಮವಾರ, 7 ಸೆಪ್ಟಂಬರ್ 2020 (10:50 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೆ ಶೂಟಿಂಗ್ ಗೆ ಮರಳುತ್ತಿದ್ದಾರೆ. ಸೆಪ್ಟೆಂಬರ್ 20 ರಿಂದ ಯುವರತ್ನ ಹಾಡಿನ ಚಿತ್ರೀಕರಣ ಆರಂಭವಾಗಲಿದೆ.

 
ಯುವರತ್ನ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಲು ಚಿತ್ರತಂಡ ಈ ಮೊದಲು ಪ್ಲ್ಯಾನ್ ಮಾಡಿತ್ತು. ಆದರೆ ಕೊರೋನಾದಿಂದ ಅರ್ಧಕ್ಕೇ ನಿಂತಿತ್ತು. ಇದೀಗ ಜಾನಿ ಮಾಸ್ಟರ್ ನಿರ್ದೇಶನದಲ್ಲಿ ಪುನೀತ್ ಇಂಟ್ರಡಕ್ಷನ್ ಹಾಡಿಗೆ  ಹೆಜ್ಜೆ ಹಾಕಲಿದ್ದಾರೆ. ಈ ಸಿನಿಮಾದಲ್ಲಿ ಹಾಡಿನ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ