ನಿರ್ಮಾಪಕನಾಗಿ ಗೆದ್ದ ಪುನೀತ್ ರಾಜಕುಮಾರ್

ಶನಿವಾರ, 29 ಫೆಬ್ರವರಿ 2020 (09:15 IST)
ಬೆಂಗಳೂರು: ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಿಸಿದ್ದ ಮಾಯಾಬಜಾರ್ 2016 ಸಿನಿಮಾ ಮೊದಲ ದಿನವೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.


ಆ ಮೂಲಕ ಪುನೀತ್ ತಮ್ಮ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ಎರಡನೇ ಸಿನಿಮಾದಲ್ಲೂ ಗೆಲುವು ಕಂಡಿದ್ದಾರೆ. ಮಾಯಾಬಜಾರ್ 2016 ಪಕ್ಕಾ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದ್ದು ಇಲ್ಲಿ ಕಾಮಿಡಿ, ರೊಮ್ಯಾನ್ಸ್, ಅಳು-ನಗು ಎಲ್ಲವೂ ಇದೆ ಎಂದು ಪ್ರೇಕ್ಷಕ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಅಲ್ಲಿಗೆ ನಿರ್ದೇಶಕ ರಾಧಾಕೃಷ್ಣ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಒಂದು ಒಳ್ಳೆಯ ಕತೆ ಸಿನಿಮಾದಲ್ಲಿದೆ. ಆ ಕತೆಯನ್ನು ರಾಧಾಕೃಷ್ಣ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕೂಲ್ ಆಗಿ ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು ಎಂದು ಚಿತ್ರ ನೋಡಿದ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ