ನಟ ಅಲ್ಲು ಅರ್ಜುನ್ ಪರ ಬ್ಯಾಟಿಂಗ್ ಮಾಡಿದ ಪುಷ್ಪ ನಟಿ ರಶ್ಮಿಕಾ ಮಂದಣ್ಣ, ಏನಂದ್ರು

Sampriya

ಶುಕ್ರವಾರ, 13 ಡಿಸೆಂಬರ್ 2024 (18:37 IST)
Photo Courtesy X
ಅಲ್ಲು ಅರ್ಜುನ್ ಅವರ ಬಂಧನಕ್ಕೆ ಸಂಬಂಧಿಸಿದಂತೆ  ಅವರ ಪುಷ್ಪಾ ಸಿನಿಮಾದ ಸಹನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಮಾಧ್ಯಮದಲ್ಲಿ ಅಂತಿಮವಾಗಿ ಮೌನ ಮುರಿದಿದ್ದಾರೆ.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಪುಷ್ಪ 2: ದಿ ರೂಲ್ ಪ್ರೀಮಿಯರ್‌ನಲ್ಲಿ ಮಹಿಳೆಯೊಬ್ಬರ ದುರಂತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಅಲ್ಲು ಅರ್ಜುನ್ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ರಶ್ಮಿಕಾ ಮಂದಣ್ಣ ಅವರು, 'ಈಗ ನೋಡುತ್ತಿರುವುದನ್ನು ನಂಬಲು ಸಾಧ್ಯವಿಲ್ಲ'  "ದುರದೃಷ್ಟಕರ ಮತ್ತು ಆಳವಾದ ದುಃಖಕರ" ಎಂದು ವಿವರಿಸಿದ್ದಾರೆ ಆದರೆ "ಎಲ್ಲವನ್ನೂ ಒಬ್ಬ ವ್ಯಕ್ತಿಯ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಅಲ್ಲು ಅರ್ಜುನ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ಗೆ ತೆಗೆದುಕೊಂಡು, ರಶ್ಮಿಕಾ ಹೀಗೆ ಬರೆದಿದ್ದಾರೆ, 'ನಾನು ಇದೀಗ ನೋಡುತ್ತಿರುವುದನ್ನು ನಾನು ನಂಬಲು ಸಾಧ್ಯವಿಲ್ಲ.. ಸಂಭವಿಸಿದ ಘಟನೆಯು ದುರದೃಷ್ಟಕರ ಮತ್ತು ಆಳವಾದ ದುಃಖಕರ ಘಟನೆಯಾಗಿದೆ. ಆದರೆ, ಎಲ್ಲದಕ್ಕೂ ಒಬ್ಬನೇ ಒಬ್ಬ ವ್ಯಕ್ತಿಯ ಮೇಲೆ ಆರೋಪ ಹೊರಿಸುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ಪರಿಸ್ಥಿತಿಯು ನಂಬಲಾಗದ ಮತ್ತು ಹೃದಯವಿದ್ರಾವಕವಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ