ನಟಿ ಸಮಂತಾಗೆ ಅಪರೂಪದ ಖಾಯಿಲೆ

ಸೋಮವಾರ, 31 ಅಕ್ಟೋಬರ್ 2022 (08:20 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ನಂ.1 ಹೀರೋಯಿನ್ ಸಮಂತಾ ಋತು ಪ್ರಭು ತಮ್ಮ ಅನಾರೋಗ್ಯದ ಬಗ್ಗೆ ಇದ್ದ ವದಂತಿಗಳಿಗೆ ತಾವೇ ಸ್ಪಷ್ಟನೆ ನೀಡಿದ್ದಾರೆ.

ಸಮಂತಾಗೆ ಚರ್ಮ ಸಂಬಂಧೀ ಖಾಯಿಲೆಯಿದೆ. ಈ ಕಾರಣಕ್ಕೆ ಅಮೆರಿಕಾಗೆ ಚಿಕಿತ್ಸೆಗೆ ತೆರಳಿದ್ದಾರೆ ಎಂಬ ವದಂತಿಯಿತ್ತು. ಇದರಿಂದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿತ್ತು. ಇದೀಗ ಸ್ವತಃ ಸಮಂತಾ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ತಮಗೆ ಮಾಂಸಖಂಡಗಳಿಗೆ ಸಂಬಂಧಿಸಿದ ಮಿಯೋಸೈಟಿಸ್ ಎನ್ನುವ ಖಾಯಿಲೆಯಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ಕಷ್ಟದ ಸಂದರ್ಭದಲ್ಲಿ ತಮ್ಮ ಜೊತೆಗಿರುವ ಅಭಿಮಾನಿಗಳಿಗೆ ಸಮಂತಾ ಧನ್ಯವಾದ ಸಲ್ಲಿಸಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ