ಮಂಜುಮ್ಮೇಲ್ ಬಾಯ್ಸ್ ಸಿನಿಮಾ ತಂಡವನ್ನು ಮನೆಗೆ ಕರೆಸಿದ ತಲೈವಾ ರಜನೀಕಾಂತ್
ಮಲಯಾಳಂನಲ್ಲಿ 200 ಕೋಟಿ ಕಲೆಕ್ಷನ್ ದಾಖಲೆ ಮಾಡಿದ್ದ ಮಂಜುಮ್ಮೇಲ್ ಬಾಯ್ಸ್ ಸಿನಿಮಾ ನೈಜ ಘಟನೆಯಾಧಾರಿತ ಸಿನಿಮಾವಾಗಿತ್ತು. ಎಂದಿನಂತೆ ಅನಗತ್ಯ ಆಕ್ಷನ್, ಮಸಾಲೆಗಳಿಲ್ಲದೇ ಇದ್ದರೂ ಕತೆಯ ಮೂಲಕವೇ ಜನರನ್ನು ಸೆರೆ ಹಿಡಿದ ಸಿನಿಮಾವಿದು.
ಈ ಸಿನಿಮಾ ತಂಡವನ್ನು ಈಗ ಸ್ವತಃ ಸೂಪರ್ ಸ್ಟಾರ್ ರಜನೀಕಾಂತ್ ಮನೆಗೆ ಕರೆಸಿ ಸನ್ಮಾನಿಸಿದ್ದಾರೆ. ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ರಜನೀಕಾಂತ್ ಚಿತ್ರತಂಡವನ್ನು ಮನೆಗೇ ಕರೆಸಿದ್ದರು. ಬಳಿಕ ಇದೊಂದು ಅದ್ಭುತ ಸಿನಿಮಾ ಎಂದು ಚಿತ್ರತಂಡವನ್ನು ಅಭಿನಂದಿಸಿದ್ದಾರೆ.
ನಿರ್ದೇಶಕ ಚಿದಂಬರಂ, ನಟರಾದ ಗಣಪತಿ, ಚಂದು ಸಲೀಂಕುಮಾರ್, ದೀಪಕ್ ಪರಂಬೋಲ್ ಸೇರಿದಂತೆ ಚಿತ್ರತಂಡ ರಜನೀಕಾಂತ್ ರನ್ನು ಭೇಟಿ ಮಾಡಿದೆ. ಬಳಿಕ ಚಿತ್ರತಂಡದೊಂದಿಗೆ ರಜನಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.