ಬಿಗ್ ಬಾಸ್ ನಲ್ಲಿ ಹೊಸ ಜೋಡಿಯಾಗ್ತಿದ್ದಾರಾ ರಾಕೇಶ್-ಅಮೂಲ್ಯ?
ಇತ್ತೀಚೆಗೆ ಒಟಿಟಿ ಸ್ಪರ್ಧಿಯಾಗಿದ್ದ ರಾಕೇಶ್ ಅಡಿಗ ಮತ್ತು ನವೀನರಾಗಿ ಮನೆಗೆ ಎಂಟ್ರಿಕೊಟ್ಟಿದ್ದ ಅಮೂಲ್ಯ ಗೌಡ ನಡುವೆ ಉತ್ತಮ ಬಾಂಧವ್ಯವೇರ್ಪಡುತ್ತಿದೆ.
ಇದನ್ನು ಗಮನಿಸಿರುವ ನೆಟ್ಟಿಗರು ರಾಕೇಶ್ ಯಾಕೋ ಅಮೂಲ್ಯಗೆ ಬೀಳ್ತಿದ್ದಾರೆ ಎಂದು ಕಿಚಾಯಿಸುತ್ತಿದ್ದಾರೆ. ಇಬ್ಬರ ನಡುವೆ ಕೆಮೆಸ್ಟ್ರಿ ವರ್ಕ್ ಆಗುತ್ತಿದ್ದು, ಈ ಜೋಡಿ ನಡುವಿನ ಬಾಂಧವ್ಯ ಗಟ್ಟಿಯಾಗುವ ಲಕ್ಷಣ ಕಾಣುತ್ತಿದೆ.