ಸಿನಿಮಾ ಬ್ಯುಸಿಯಲ್ಲೂ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್, ರಾಜ್ ಬಿ ಶೆಟ್ಟಿ

sampriya

ಗುರುವಾರ, 13 ಜೂನ್ 2024 (18:56 IST)
Photo By Instagram
ಬೆಂಗಳೂರು: ಸಿನಿಮಾಗಳಲ್ಲಿ ಜತೆಯಾಗಿ‌ ನಿಂತು ಒಬ್ಬರನೊಬ್ಬರು ಬೆಂಬಲಿಸುತ್ತಿರುವ  ನಟ ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಅವರು ಇದೀಗ ಒಟ್ಟಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.

ಸಿನಿಮಾ ಶೂಟಿಂಗ್ ನಿಂದ ಬ್ರೇಕ್ ಪಡೆದ ಇವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ‌ ಸಲ್ಲಿಸಿದರು.

ದೇವರ ಸನ್ನಿಧಿಯಲ್ಲಿ ಕಾಲ ಕಳೆದ ಇವರು ಕ್ಯಾಮಾರೆಗೆ ಪೋಸ್ ನೀಡಿದ್ದಾರೆ.

ಸದ್ಯ ರಕ್ಷಿತ್ ಶೆಟ್ಟಿ ಅವರು ನಟನೆ‌ ಜತೆ ಪ್ರೊಡಕ್ಷನ್ ಕಡೆಯೂ ಬ್ಯುಸಿಯಾಗಿದ್ದಾರೆ. ಇನ್ನೂ ರಾಜ್ ಬಿ ಶೆಟ್ಟಿ ಅವರು ಈಚೆಗೆ ಮಲಯಾಳಂ ‘ಟರ್ಬೋ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ