ರಕ್ಷಿತ್ ಶೆಟ್ಟಿಗೆ ಚಾರ್ಲಿ ಟಾರ್ಚರ್, ಪ್ರೇಕ್ಷಕರ ಮುಖದಲ್ಲಿ ನಗು

ಗುರುವಾರ, 9 ಸೆಪ್ಟಂಬರ್ 2021 (17:12 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹ್ಯೂಮರ್ ಟ್ರ್ಯಾಕ್ ಗೆ ಮರಳಿದ್ದಾರೆ. ಚಾರ್ಲಿ 777 ಸಿನಿಮಾದ ಟಾರ್ಚರ್ ಹಾಡು ನೋಡಿದ ಮೇಲೆ ಹಳೆಯ ರಕ್ಷಿತ್ ಶೆಟ್ಟಿ ಮರಳಿದ್ದಾರೆ ಎಂದು ಪ್ರೇಕ್ಷಕರು ಖುಷಿಪಟ್ಟಿದ್ದಾರೆ.


ಇಂದು ಬಿಡುಗಡೆಯಾದ ಹಾಡು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ನಾಯಿ ಚಾರ್ಲೀ ಮತ್ತು ಅದು ರಕ್ಷಿತ್ ಜೊತೆಗೆ ಮಾಡುವ ತುಂಟಾಟಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ.

ಸ್ವತಃ ಕಿಚ್ಚ ಸುದೀಪ್ ಹಾಡು ನೋಡಿ ರಕ್ಷಿತ್ ಬೆನ್ನುತಟ್ಟಿದ್ದಾರೆ. ಪಕ್ಕಾ ಮನರಂಜನೆಯ ಈ ಹಾಡು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಲ್ಲೂ ಮೋಡಿ ಮಾಡುತ್ತಿದೆ. ಉತ್ತಮ ವೀಕ್ಷಣೆ ಪಡೆಯುತ್ತಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.ಡಿಸೆಂಬರ್ 31 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ