ಹೀರೋಯಿನ್ ದಪ್ಪಗಾದ್ರೆ ಡುಮ್ಮಿ ಅಂತ ಕರೀತಾರೆ, ಹೀರೋ ಹೇಗಿದ್ರೂ ನಡೆಯುತ್ತೆ: ರಮ್ಯಾ ಕಿಡಿ
ಹೀರೋಯಿನ್ ಕೊಂಚ ದಪ್ಪವಾಗಿದ್ರೂ ಡುಮ್ಮಿ, ಬುಡ್ಡಿ ಎಂದು ಹೀಗೆಳೆಯುತ್ತಾರೆ. ಆದರೆ ಹೀರೋ 65 ವರ್ಷ ಕಳೆದ್ರೂ ಕೂದಲು ಇಲ್ಲದೇ, ಕೆನ್ನೆ ಗುಳಿ ಬಿದ್ದರೂ ವಿಗ್ ಹಾಕಿ ಹೀರೋ ಆಗಿ ಉಳಿಯುತ್ತಾರೆ. ಚಿತ್ರರಂಗದ ಈ ಮನಸ್ಥಿತಿ ಬದಲಾಗಬೇಕು ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನೂ ಕಾಲಿನ ಆಪರೇಷನ್ ಗೊಳಗಾದ ಮೇಲೆ ತೂಕ ಹೆಚ್ಚಾಯ್ತು. ತೂಕ ಹೆಚ್ಚಿಸಿಕೊಳ್ಳಲು ನನ್ನದೇ ನಿಯಮ ಮತ್ತು ನಿಬಂಧನೆಗಳನ್ನು ಅನುಸರಿಸುತ್ತಿದ್ದೇನೆ. ಪುರುಷ ಮತ್ತು ಮಹಿಳೆಯರ ನಡುವೆ ಈ ಅಲಿಖಿತ ವ್ಯತ್ಯಾಸ ಮೊದಲು ತೊಲಗಬೇಕು ಎಂದು ರಮ್ಯಾ ಆಕ್ರೋಶದಿಂದ ಹೇಳಿದ್ದಾರೆ.