ರೇಪ್ ಕೇಸ್: ಆ ಒಂದು ಕಾರಣಕ್ಕೆ ಜಾನಿ ಮಾಸ್ಟರ್‌ಗೆ ನಾಲ್ಕು ದಿನದ ಜಾಮೀನು ನೀಡಿದ ಕೋರ್ಟ್‌

Sampriya

ಗುರುವಾರ, 3 ಅಕ್ಟೋಬರ್ 2024 (15:44 IST)
Photo Courtesy X
ಆಂಧ್ರಪ್ರದೇಶ: ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿರುವ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರಿಗೆ ರಂಗಾ ರೆಡ್ಡಿ ಜಿಲ್ಲಾ ನ್ಯಾಯಾಲಯ ಗುರುವಾರ (ಅಕ್ಟೋಬರ್ 3) ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.

ವರದಿ ಪ್ರಕಾರ ಜಾಮೀನು ಅರ್ಜಿಯನ್ನು ಅ6 ರಿಂದ 10 ರವರೆಗೆ ಮಂಜೂರು ಮಾಡಲಾಗಿದೆ. ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಉಪಸ್ಥಿತಿಯ ಮಹತ್ವವನ್ನು ಪರಿಗಣಿಸಿ ಜಾಮೀನು ನೀಡಲು ನಿರ್ಧರಿಸಲಾಗಿದೆ.

ಕೋರ್ಟ್ ನೀಡಿದ ಷರತ್ತುಗಳು ಹೀಗಿದೆ: ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಬೇಕು, ತಲಾ ₹ 2 ಲಕ್ಷದ ಇಬ್ಬರು ಶ್ಯೂರಿಟಿ ನೀಡಬೇಕು ಮತ್ತು ಈ ಅವಧಿಯಲ್ಲಿ ಮಾಧ್ಯಮ ಸಂದರ್ಶನಗಳನ್ನು ನೀಡದಂತೆ ಅಥವಾ ಯಾವುದೇ ಹೊಸ ಮಧ್ಯಂತರ ಜಾಮೀನು ಅರ್ಜಿಗಳನ್ನು ಸಲ್ಲಿಸದಂತೆ ಜಾನಿ ಮಾಸ್ಟರ್‌ಗೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.

ಧನುಷ್ ಮತ್ತು ನಿತ್ಯಾ ಮೆನೆನ್ ಅಭಿನಯದ ತಿರುಚಿತ್ರಾಂಬಲಂ ಚಿತ್ರದ ಮೇಘಂ ಕರುಕ್ಕಾಟ ಹಾಡಿನಲ್ಲಿನ ನೃತ್ಯ ಸಂಯೋಜನೆಗೆ ಇವರು ರಾಷ್ಟ್ರಮಟ್ಟದ ಮನ್ನಣೆಯನ್ನು ಪಡೆದಿದ್ದಾರೆ. ಆಗಸ್ಟ್‌ನಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಯಿತು ಮತ್ತು ಸಮಾರಂಭವು ಈ ವಾರದ ಕೊನೆಯಲ್ಲಿ ದೆಹಲಿಯಲ್ಲಿ ನಡೆಯಲಿದೆ. ಈ ಹಿನ್ನೆಲೆ ಕೋರ್ಟ್ ಇದೀಗ ಷರತ್ತು ಬದ್ಧ ಜಾಮೀನು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ