ಸಿನಿಮಾ ತಂಡಕ್ಕೆ ಗುಡ್ ಬೈ ಹೇಳಿದ ರಶ್ಮಿಕಾ ಮಂದಣ್ಣ!
ಆದರೆ ಅವರು ಗುಡ್ ಬೈ ಹೇಳಿರುವುದು ಗುಡ್ ಬೈ ಸಿನಿಮಾ ತಂಡಕ್ಕೆ. ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿರುವ ಗುಡ್ ಬೈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಹೀಗಾಗಿ ಈ ಸಿನಿಮಾ ತಂಡಕ್ಕೆ ರಶ್ಮಿಕಾ ಗುಡ್ ಬೈ ಎಂದು ಅನುಭವ ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಅಭಿನಯಿಸಿದ ಕ್ಷಣ ಅಮೋಘ. ಅಮಿತಾಭ್ ಸರ್ ನೀವು ಅತ್ಯಂತ ಬೆಸ್ಟ್ ವ್ಯಕ್ತಿ. ನೀನಾ ಗುಪ್ತಾ ನೀವು ಎಷ್ಟು ಒಳ್ಳೆಯವರು ಎಂದು ಹೇಳಕ್ಕೂ ಆಗಲ್ಲ. ಈ ಎರಡು ವರ್ಷಗಳ ಚಿತ್ರೀಕರಣದ ಪಯಣ ಅವಿಸ್ಮರಣೀಯ. ಮನಸ್ಪೂರ್ತಿಯಾಗಿ ನಗಲು ರೆಡಿಯಾಗಿ ಎಂದು ರಶ್ಮಿಕಾ ಸುದೀರ್ಘ ಪೋಸ್ಟ್ ಮೂಲಕ ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.