ರಶ್ಮಿಕಾ ನಾಯಿ ಬಗ್ಗೆ ಗಾಸಿಪ್! ಸ್ಪಷ್ಟನೆ ಕೊಟ್ಟ ನಟಿ

ಶನಿವಾರ, 25 ಜೂನ್ 2022 (09:39 IST)
ಮುಂಬೈ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಟಿ ರಶ್ಮಿಕಾ ಮಂದಣ್ಣ ಈಗ ತಮ್ಮ ನಾಯಿ ಕಾರಣಕ್ಕೆ ಸ್ಪಷ್ಟನೆ ಕೊಡಬೇಕಾಗಿ ಬಂದಿದೆ.
 

ರಶ್ಮಿಕಾ ಮುದ್ದಿನ ನಾಯಿ ಔರಾ ಬಗ್ಗೆ ಗಾಸಿಪ್ ಹುಟ್ಟಿಕೊಂಡಿದ್ದು, ಇದಕ್ಕೆ ಸ್ವತಃ ರಶ್ಮಿಕಾ ಟ್ವೀಟ್ ಮೂಲಕ ಸ್ಪಷ್ಟನೆ ಕೊಡಬೇಕಾಗಿ ಬಂದಿದೆ.

ರಶ್ಮಿಕಾ ಎಲ್ಲೇ ಹೋದ್ರೂ ನಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗ್ತಾರೆ. ವಿಮಾನ ಪ್ರಯಾಣ ವೇಳೆ ನಾಯಿಗೂ ಪ್ರತ್ಯೇಕ ಟಿಕೆಟ್ ಕಾದಿರಿಸಬೇಕಾಗುತ್ತದೆ. ಇದರಿಂದ ನಿರ್ಮಾಪಕರಿಗೆ ಹೊರೆಯಾಗುತ್ತಿದೆ ಎಂಬ ಗಾಸಿಪ್ ಹುಟ್ಟಿಕೊಂಡಿತ್ತು. ಈ ಬಗ್ಗೆ ರಶ್ಮಿಕಾ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ನೀವಾಗಿಯೇ ಔರಾಳನ್ನು ಕರೆದುಕೊಂಡು ಹೋಗಬೇಕು ಎಂದರೂ ಅವಳು ಬರಲ್ಲ. ಅವಳು ಹೈದರಾಬಾದ್ ನಲ್ಲಿಯೇ ಆರಾಮವಾಗಿದ್ದಾಳೆ. ನಿಮ್ಮ ಕಾಳಜಿ ಧನ್ಯವಾದಗಳು’ ಎಂದು ರಶ್ಮಿಕಾ ತಮಾಷೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ