ಬ್ರೇಕಿಂಗ್ ನ್ಯೂಸ್ ಕೊಡ್ತೀನಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದು ಇದನ್ನು!

ಶನಿವಾರ, 30 ಮಾರ್ಚ್ 2019 (09:04 IST)
ಬೆಂಗಳೂರು: ಇಂದು ಸಂಜೆ ಆರು ಗಂಟೆಗೆ ಎಲ್ಲರೂ ಕಾಯ್ತಿರಿ, ಬ್ರೇಕಿಂಗ್ ನ್ಯೂಸ್ ಕೊಡ್ತೀನಿ ಎಂದು ನಟಿ ರಶ್ಮಿಕಾ ಮಂದಣ್ಣ ನಿನ್ನೆ ಇದ್ದಕ್ಕಿದ್ದಂತೆ ಟ್ವೀಟ್ ಮಾಡಿದ್ದರು.


ರಶ್ಮಿಕಾ ಟ್ವೀಟ್ ನೋಡಿ ಅಭಿಮಾನಿಗಳು ಈಕೆ ಏನನ್ನು ಹೇಳುತ್ತಿರಬಹುದು ಎಂದು ಗೆಸ್ ಮಾಡಿದ್ದೇ ಮಾಡಿದ್ದು. ಅವರೆಲ್ಲರ ನಿರೀಕ್ಷೆ ಮೀರಿ ರಶ್ಮಿಕಾ ನಿಜಕ್ಕೂ ಬ್ರೇಕಿಂಗ್ ನ್ಯೂಸ್ ಒಂದನ್ನು ಅನೌನ್ಸ್ ಮಾಡಿದ್ದಾರೆ. ಅದೇನು ಗೊತ್ತಾ?

ಕಿರಿಕ್ ಬೆಡಗಿ ಇದೀಗ ತೆಲುಗಿನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿರುವ ವಿಚಾರ ಬಹಿರಂಗಪಡಿಸಿದ್ದಾರೆ. ‘ಚಲೋ’ ಸಿನಿಮಾ ನಿರ್ದೇಶಕ ವೆಂಕಿ ಕುದಮುಲಾ ಜತೆಗೆ ‘ಭೀಷ್ಮ’ ಎನ್ನುವ ಟೈಟಲ್ ನಲ್ಲಿ ಹೊಸ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ರಶ್ಮಿಕಾ. ಇದೇ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿತಿನ್ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ