ಪುಷ್ಪ 2 ಶೂಟಿಂಗ್ ಬಿಟ್ಟು ಹೊರನಡೆದಿದ್ದೇಕೆ ರಶ್ಮಿಕಾ ಮಂದಣ್ಣ?

Krishnaveni K

ಭಾನುವಾರ, 7 ಜನವರಿ 2024 (10:51 IST)
ಹೈದರಾಬಾದ್: ಅನಿಮಲ್ ಸಕ್ಸಸ್ ಆದ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಪುಷ್ಪ 2 ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.

ಆದರೆ ಶೂಟಿಂಗ್ ಗೆ ಬಂದ ಎರಡೇ ದಿನಕ್ಕೆ ಸಣ್ಣ ವಿರಾಮ ತೆಗೆದುಕೊಂಡು ಶೂಟಿಂಗ್ ಸೆಟ್ ನಿಂದ ತೆರಳಿದ್ದಾರೆ. ರಶ್ಮಿಕಾ ಮುಂಬೈಗೆ ಮರಳಿದ್ದಾರೆ ಎನ್ನಲಾಗಿದೆ.

ಹೊಸ ವರ್ಷದ ಸಂದರ್ಭದಲ್ಲಿ ರಶ್ಮಿಕಾ ಶೂಟಿಂಗ್ ಗಳಿಂದ ಬ್ರೇಕ್ ಪಡೆದು ರಿಲ್ಯಾಕ್ಸ್ ಮಾಡಿ ಬಂದಿದ್ದರು. ಇದಾದ ಬಳಿಕ ಪುಷ್ಪ 2 ಸೆಟ್ ಗೆ ಬಂದಿದ್ದರು. ಆದರೆ ಶೂಟಿಂಗ್ ಗೆ ಬಂದ ಎರಡೇ ದಿನಕ್ಕೆ ಮತ್ತೆ ಬ್ರೇಕ್ ತೆಗೆದುಕೊಂಡಿದ್ದಾರೆ.

ಇದಕ್ಕೆ ಕಾರಣ ರಶ್ಮಿಕಾ ಬಾಲಿವುಡ್ ನಲ್ಲಿ ಅಭಿಯನಯಿಸಿದ್ದ ಅನಿಮಲ್ ಸಿನಿಮಾ ಸಕ್ಸಸ್ ಪಾರ್ಟಿ ಎನ್ನಲಾಗಿದೆ. ಅನಿಮಲ್ ಸಕ್ಸಸ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ರಶ್ಮಿಕಾ ಪುಷ್ಪ 2 ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಿ ಮುಂಬೈಗೆ ಮರಳಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ