ಖುಷಿ ಸಿನಿಮಾಗೆ ವಿಜಯ್ ದೇವರಕೊಂಡ ಪಡೆದ ಸಂಭಾವನೆ ವಿವರ

ಮಂಗಳವಾರ, 5 ಸೆಪ್ಟಂಬರ್ 2023 (07:35 IST)
ಹೈದರಾಬಾದ್: ವಿಜಯ್ ದೇವರಕೊಂಡ-ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಖುಷಿ ಸಿನಿಮಾ ಈಗ ಬಾಕ್ಸ್‍ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ.

ಲೈಗರ್ ಸಿನಿಮಾ ಸೋಲಿನ ಬಳಿಕ ವಿಜಯ್ ದೇವರಕೊಂಡಗೆ ಮತ್ತೆ ಗೆಲುವು ತಂದುಕೊಟ್ಟಿದ್ದು ಖುಷಿ ಸಿನಿಮಾ. ಟಾಲಿವುಡ್ ನ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ವಿಜಯ್ ಈ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

ಮೂಲಗಳ ಪ್ರಕಾರ ಲೈಗರ್ ಸೋತರೂ ವಿಜಯ್ ಸಂಭಾವನೆಯಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಈ ಸಿನಿಮಾಗೆ ಅವರು ಬರೋಬ್ಬರಿ 21 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಸಮಂತಾ ಎಂದಿನಂತೆ 4.5 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ