ಖುಷಿ ಸಿನಿಮಾ ಸಂಭಾವನೆಯನ್ನು ಬಡವರಿಗೆ ದಾನ ಮಾಡಲಿದ್ದಾರೆ ವಿಜಯ್ ದೇವರಕೊಂಡ
ಲೈಗರ್ ಸಿನಿಮಾ ಬಳಿಕ ವಿಜಯ್ ಗೆ ಬ್ರೇಕ್ ಕೊಟ್ಟ ಸಿನಿಮಾವಿದು. ಈ ಸಿನಿಮಾದ ಗೆಲುವು ವಿಜಯ್ ದೇವರಕೊಂಡಗೆ ನಿಜಕ್ಕೂ ಖುಷಿ, ನೆಮ್ಮದಿ ತಂದಿದೆ.
ಇದೇ ಕಾರಣಕ್ಕೆ ಅವರೀಗ ಒಂದು ದೃಢ ನಿರ್ಧಾರ ಮಾಡಿದ್ದಾರೆ. ಖುಷಿ ಸಿನಿಮಾದ ಸಂಭಾವನೆಯಲ್ಲಿ 1 ಕೋಟಿ ರೂ.ಗಳನ್ನು ಬಡ ಕುಟುಂಬಗಳಿಗೆ ದಾನ ಮಾಡಲು ವಿಜಯ್ ದೇವರಕೊಂಡ ತೀರ್ಮಾನಿಸಿದ್ದಾರೆ. 100 ಕುಟುಂಬಗಳಿಗೆ ತಲಾ 1 ಲಕ್ಷ ರೂ.ಗಳಂತೆ ದಾನ ಮಾಡಲಿದ್ದಾರಂತೆ. ಇನ್ ಸ್ಟಾಗ್ರಾಂನಲ್ಲಿ ಸ್ಪ್ರೆಡಿಂಗ್ ಖುಷಿ ಅಥವಾ ದೇವರ ಫ್ಯಾಮಿಲಿ ಎನ್ನುವ ಹೆಸರಿನ ಫಾರ್ಮ್ ಒಂದನ್ನು ಬಿಡುಗಡೆ ಮಾಡಲಿದ್ದಾರೆ. ಆ ಫಾರ್ಮ್ ಭರ್ತಿ ಮಾಡಿ ಅಗತ್ಯವಿರುವವರು ತಮ್ಮ ಕುಟುಂಬ ನಿರ್ವಹಣೆಗೆ ಅಥವಾ ಮಕ್ಕಳ ಫೀಸ್ ಗಾಗಿ ಹಣ ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ನನ್ನ ಯಶಸ್ಸಿನ ಪಾಲನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ ವಿಜಯ್. ಮುಂದಿನ 10 ದಿನಗಳೊಳಗಾಗಿ ತಾವು ನಿರ್ಧರಿಸಿರುವ ಕೆಲಸ ಪೂರ್ತಿ ಮಾಡಲಿದ್ದಾರಂತೆ.