ದರ್ಶನ್ ಗೆ ಹೆಗಲು ಕೊಟ್ಟು ಆಸ್ಪತ್ರೆಯಿಂದ ಹೊರಗೆ ಕರೆತಂದ ಮಗ ವಿನೀಶ್

Krishnaveni K

ಬುಧವಾರ, 18 ಡಿಸೆಂಬರ್ 2024 (12:47 IST)
ಬೆಂಗಳೂರು: ಬೆನ್ನು ನೋವಿಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೇಣುಕಾಸ್ವಾಮಿ ಮರ್ಡರ್ ಕೇಸ್ ಆರೋಪಿ, ನಟ ದರ್ಶನ್ ಇಂದು ಸರ್ಜರಿಯಿಲ್ಲದೇ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿದ್ದರು. ಇಂದು ಅವರು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಸರ್ಜರಿಗೆಂದೇ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಗಿತ್ತು. ಆದರೆ ಇದುವರೆಗೆ ಸರ್ಜರಿ ಮಾಡಿಸಿಕೊಂಡಿರಲಿಲ್ಲ. ಇದೀಗ ರೆಗ್ಯುಲರ್ ಜಾಮೀನು ಮಂಜೂರಾಗುತ್ತಿದ್ದಂತೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕುಂಟುತ್ತಲೇ ಇಂದು ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ಗೆ ಮಗ ವಿನೀಶ್ ಹೆಗಲು ಕೊಟ್ಟಿದ್ದಾರೆ. ವಿನೀಶ್ ರನ್ನು ಹಿಡಿದುಕೊಂಡು ಕುಂಟುತ್ತಲೇ ದರ್ಶನ್ ಆಸ್ಪತ್ರೆಯಿಂದ ಹೊರಬಂದು ಕಾರು ಏರಿ ಮನೆಗೆ ಮರಳಿದ್ದಾರೆ.

ದರ್ಶನ್ ರನ್ನು ಡಿಸ್ಚಾರ್ಜ್ ಮಾಡಿಸುವ ಸಲುವಾಗಿ ಇಂದು ಅವರ ಮಗ ವಿನೀಶ್, ಅಳಿಯ, ಸ್ನೇಹಿತ ಧನ್ವೀರ್ ಗೌಡ ಕೂಡಾ ಆಗಮಿಸಿದ್ದರು. ಆಸ್ಪತ್ರೆಯಿಂದ ನೇರವಾಗಿ ದರ್ಶನ್ ಹೊಸಕೆರೆಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್ ಗೆ ತೆರಳಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ