ರಿಷಬ್ ಶೆಟ್ಟಿ ಹೊಸ ಸಿನಿಮಾದ ವಿಚಿತ್ರ ಹೆಸರು ನೋಡಿ ಜನ ಏನಂತಿದ್ದಾರೆ ಗೊತ್ತಾ?

ಶನಿವಾರ, 4 ಮೇ 2019 (08:55 IST)
ಬೆಂಗಳೂರು: ಬೆಲ್ ಬಾಟಂ ಯಶಸ್ಸಿನ ಖುಷಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆದರೆ ಈ ಹೊಸ ಸಿನಿಮಾದ ಟೈಟಲ್ ನೋಡಿ ಜನ ತಲೆಕೆರೆದುಕೊಳ್ಳುತ್ತಿದ್ದಾರೆ.


ಅಷ್ಟು ಸ್ಪೆಷಲ್ ಆಗಿದೆ ಶೆಟ್ಟರ ಹೊಸ ಸಿನಿಮಾ ಟೈಟಲ್. ವಾವ್ ಏನಿದು ಗುರೂ? ಸೂಪರ್ ಆಗಿದೆ ಎಂದು ರಿಷಬ್ ಗೆ ಹೊಗಳಿಕೆ ಜತೆಗೆ ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ರಿಷಬ್ ಸಂಸ್ಥೆಯ ಹೊಸ ಸಿನಿಮಾ ಟೈಟಲ್ ಏನು ಗೊತ್ತಾ?

‘ಅಂಟಗೋನಿ ಶೆಟ್ಟಿ’ ಎಂಬುದು ಚಿತ್ರದ ಟೈಟಲ್. ಸಮರ್ಥ್ ಕಡಕೊಲ್ ಈ ಚಿತ್ರದ ನಿರ್ದೇಶಕರು. ಮತ್ತೆ ರಿಷಬ್ ಈ ಸಿನಿಮಾದಲ್ಲಿ ಡಿಟೆಕ್ಟಿವ್ ಪಾತ್ರ ಮಾಡಲಿದ್ದಾರೆ ಎಂದು ಕನ್ ಫರ್ಮ್ ಆಗಿದೆ. ಫಸ್ಟ್ ಲುಕ್ ಕೂಡಾ ಕುತೂಹಲಕಾರಿಯಾಗಿದೆ. ಸಿನಿಮಾವೂ ಹಾಗೇ ಇರಲಿ ಎಂಬುದು ಪ್ರೇಕ್ಷಕರ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ