ಬಾಲಿವುಡ್ಡನ್ನೇ ಇಲ್ಲಿಗೆ ಕರೆಸಿಕೊಳ್ತೀನಿ ಬಿಡಿ: ರಾಕಿ ಭಾಯಿ ಯಶ್
ಯಶ್ ಎಲ್ಲೇ ಹೋದರೂ ಅವರ ಮುಂದಿನ ಸಿನಿಮಾ ಅಪ್ ಡೇಟ್ ಯಾವಾಗ ಎಂಬ ಪ್ರಶ್ನೆ ಬಂದೇ ಬರುತ್ತದೆ. ಇಂದೂ ಮಾಧ್ಯಮದವರು ಇದೇ ಪ್ರಶ್ನೆ ಕೇಳಿದಾಗ ಯಶ್ ಪ್ರತಿಕ್ರಿಯಿಸಿದ್ದಾರೆ.
ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಅವರು ದುಡ್ಡುಕೊಟ್ಟು ನನ್ನ ಸಿನಿಮಾ ನೋಡ್ತಾರೆ ಅಂದರೆ ಆ ದುಡ್ಡಿಗೆ ವಾಲ್ಯೂ ಇದೆ. ಫ್ರೀ ಆಗಿ ಸಿನಿಮಾ ನೋಡ್ತಾರೆ ಎಂದರೆ ಮನಬಂದಂತೆ ಸಿನಿಮಾ ಮಾಡಬಹುದಿತ್ತು. ಇಷ್ಟು ದಿನವೂ ನಾನು ಸುಮ್ಮನೇ ಕೂತಿಲ್ಲ. ಪ್ರತೀ ದಿನ ಮುಂದಿನ ಸಿನಿಮಾ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಒಂದು ಕ್ಷಣವನ್ನೂ ವೇಸ್ಟ್ ಮಾಡಿಲ್ಲ. ನನ್ನ ಮೇಲೆ ಜವಾಬ್ಧಾರಿಯಿದೆ. ಇಡೀ ಜಗತ್ತು ನೋಡುತ್ತಿದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡ್ತೀವಿ. ಸ್ವಲ್ಪ ದಿನ ಕಾಯಬೇಕಾಗುತ್ತದೆ ಎಂದಿದ್ದಾರೆ. ಇನ್ನು, ಬಾಲಿವುಡ್ ಗೆ ಹೋಗ್ತೀರಿ ಎನ್ನುವ ಸುದ್ದಿ ಬಂದಿತ್ತು ಎಂಬ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಎಲ್ಲೂ ಹೋಗಿಲ್ಲ. ಇಲ್ಲೇ ಇರ್ತೀನಿ. ಬಾಲಿವುಡ್ಡನ್ನೇ ಇಲ್ಲಿಗೆ ಕರೆಸೋಣ ಬಿಡಿ ಎಂದರು.