ಪಶ್ಚಿಮ ಗೋದಾವರಿ ಕಲೆಕ್ಟರ್ ಆದ ನಟ ಸಾಯಿ ತೇಜ್

ಬುಧವಾರ, 3 ಫೆಬ್ರವರಿ 2021 (10:33 IST)
ಹೈದರಾಬಾದ್ : ಟಾಲಿವುಡ್ ನಟ ಸಾಯಿ ತೇಜ್ ಅವರು ರಿಪಬ್ಲಿಕ್ ಎಂಬ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೆಬಿ ಎಂಟರ್ ಟೈನ್ ಮೆಂಟ್ಸ್ ಬ್ಯಾನರ್ ಅಡಿಯಲ್ಲಿ  ಈ ಚಿತ್ರವನ್ನು ಜೆ.ಭಗವಾನ್ ಮತ್ತು ಜೆ. ಪುಲ್ಲಾ ರಾವ್ ನಿರ್ಮಿಸುತ್ತಿದ್ದಾರೆ.

ಇತ್ತೀಚೆಗೆ ಗಣರಾಜ್ಯೋತ್ವವದ ಗೌರವಾರ್ಥವಾಗಿ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಯಿತು. ಮತ್ತು ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಾಯಿ ತೇಜ್ ಅವರು ಪಶ್ಚಿಮ ಗೋದಾವರಿ ಕಲೆಕ್ಟರ್ ಆಗಿ  ಕಾಣಿಸಿಕೊಳ‍್ಳಲಿದ್ದಾರೆ. ಈ ಚಿತ್ರದ ಸೂಟಿಂಗ್ ಸದ್ಯ ಎಲೂರಿನಲ್ಲಿ ನಡೆಯುತ್ತಿದೆ. ಈ ಚಿತ್ರ ಜೂನ್ 4ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ