ದಿ ಕಾಶ್ಮೀರ್ ಫೈಲ್ಸ್ ವೀಕ್ಷಿಸಿ ಅನುಪಮ್ ಖೇರ್ ಗೆ ಕರೆ ಮಾಡಿದ್ದ ಸಲ್ಮಾನ್ ಖಾನ್
ಈ ಬಗ್ಗೆ ಸ್ವತಃ ಅನುಪಮ್ ಖೇರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಪುಷ್ಕರ್ ನಾಥ್ ಎಂಬ ಹಿಂದೂ ಪಂಡಿತರ ಪಾತ್ರ ಮಾಡಿದ್ದ ಅನುಪಮ್ ಖೇರ್ ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಕಣ್ತುಂಬುವಂತೆ ಮಾಡಿದ್ದರು.
ಈ ಸಿನಿಮಾ ವೀಕ್ಷಿಸಿದ ಸಲ್ಮಾನ್ ಖಾನ್ ಖುದ್ದಾಗಿ ಕರೆ ಮಾಡಿ ನನಗೆ ಅಭಿನಂದಿಸಿದರು ಮತ್ತು ಸಿನಿಮಾವನ್ನು ಕೊಂಡಾಡಿದರು ಎಂದು ಅನುಪಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.