ಹೈದರಾಬಾದ್: ನಾಗಾರ್ಜುನ ಅಕ್ಕಿನೇನಿ ಪತ್ನಿ, ನಟಿ ಸಮಂತಾ ಸೋಷಿಯಲ್ ಮೀಡಿಯಾ ಪುಟದಲ್ಲಿ ತಮ್ಮ ಹೆಸರಿನ ಜೊತೆಗಿದ್ದ ಅಕ್ಕಿನೇನಿಯನ್ನು ಕೈಬಿಟ್ಟಿದ್ದಾರೆ.
ಮದುವೆ ಬಳಿಕ ಸಮಂತಾ ತಮ್ಮ ಹೆಸರಿನ ಮುಂದೆ ಅಕ್ಕಿನೇನಿ ಎಂದು ಸರ್ ನೇಮ್ ಸೇರಿಸಿಕೊಂಡಿದ್ದರು. ಅವರ ಇನ್ ಸ್ಟಾಗ್ರಾಂ ಮತ್ತು ಟ್ವಿಟರ್ ಪುಟಗಳಲ್ಲೂ ಬರೆದುಕೊಂಡಿದ್ದರು. ಆದರೆ ಈಗ ಸಮಂತಾ ಇದ್ದಕ್ಕಿದ್ದಂತೆ ಅಕ್ಕಿನೇನಿ ಹೆಸರು ಕೈ ಬಿಟ್ಟಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಸುಮಂತಾ ಬದಲಿಗೆ ಕೇವಲ ಎಸ್ ಎಂಬ ಅಕ್ಷರವನ್ನು ತಮ್ಮ ಹೆಸರು ಮಾತ್ರ ಇಟ್ಟುಕೊಂಡಿದ್ದಾರೆ. ಯಾವ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.