ಪ್ರಯಾಗ್ ರಾಜ್: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ ಕೂಡಾ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಕುಂಭಮೇಳದಲ್ಲಿ ಸಮೀರ್ ಪತ್ನಿ ಶ್ರಾವಣಿ ಗಂಗಾ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಮೀರ್ ಆಚಾರ್ಯ ದಂಪತಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವ ಪುಣ್ಯಕ್ಷೇತ್ರಗಳಿಗೆ ತಪ್ಪದೇ ಹಾಜರಾಗುತ್ತಾರೆ. ಈ ಹಿಂದೆ ಅಯೋಧ್ಯೆ ರಾಮಮಂದಿರಕ್ಕೂ ಭೇಟಿ ಕೊಟ್ಟಿದ್ದರು. ಇದೀಗ ಕುಂಭಮೇಳದಲ್ಲಿ ಭಾಗಿಯಾಗಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಕುಂಭಮೇಳದಲ್ಲಿ ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಿಶೇಷವಾಗಿದೆ. ಇದಕ್ಕಾಗಿಯೇ ಉತ್ತರ ಪ್ರದೇಶ ಸರ್ಕಾರ ಅನೇಕ ಸ್ನಾನ ಘಟ್ಟಗಳನ್ನು ನಿರ್ಮಿಸಿದೆ. ಇದೀಗ ಶ್ರಾವಣಿ ಸಮೀರ್ ಆಚಾರ್ಯ ಕೂಡಾ ಗಂಗಾ ಸ್ನಾನ ಮಾಡುವ ದೃಶ್ಯ ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ ಗಂಗಾ ನದಿಯ ದಡದಲ್ಲಿ ಬಿಟ್ಟರೆ ಉಳಿದ ಜಾಗದಲ್ಲಿ ಏನಿದೆ ಎಂದೂ ತಿಳಯಿದಷ್ಟು ದಟ್ಟ ಮಂಜು ಆವರಿಸಿದೆ. ಅಲ್ಲಿನ ವಾತಾವರಣ ಎಷ್ಟು ತಂಪಗಿದೆ ಎಂದು ನೋಡಿದರೇ ತಿಳಿಯುತ್ತದೆ. ಅಂತಹ ಚಳಿಯಲ್ಲೂ ನದಿ ಸ್ನಾನ ಮಾಡುವುದು ಎಂದರೆ ಸುಮ್ಮನೇ ಅಲ್ಲ. ಅದಕ್ಕಾಗಿಯೇ ಕುಂಭಮೇಳದಲ್ಲಿ ಪುಣ್ಯಸ್ನಾನ ಎಂದರೆ ನಿಜಕ್ಕೂ ವಿಶೇಷ.