ಲೀಲಾವತಿ ನಿವಾಸಕ್ಕೆ ಸರ್ಪೈಸ್ ಭೇಟಿ ಕೊಟ್ಟ ಎವರ್ ಗ್ರೀನ್ ನಟಿಯರು
ಸೋಮವಾರ, 6 ಸೆಪ್ಟಂಬರ್ 2021 (10:14 IST)
ಬೆಂಗಳೂರು: ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟಿಯರಾದ ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಶ್ರುತಿ ಅಚ್ಚರಿ ಭೇಟಿ ಕೊಟ್ಟಿದ್ದಾರೆ.
ಇತ್ತೀಚೆಗೆ ತಮ್ಮ ಮನೆಯಲ್ಲಿ ಬಿದ್ದು ಪೆಟ್ಟುಮಾಡಿಕೊಂಡಿರುವ ಲೀಲಾವತಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಮೊದಲು ಶ್ರುತಿ, ಸುಧಾರಾಣಿ, ಮಾಳವಿಕಾ ಲೀಲಾವತಿ ತೋಟದ ಮನೆಗೆ ಭೇಟಿ ಕೊಟ್ಟಿದ್ದರು.
ಇದೀಗ ಮತ್ತೆ ಶ್ರುತಿ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ ಜೊತೆಗೆ ಲೀಲಾವತಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಶ್ರುತಿ ತಮ್ಮ ಕೈಯಾರೆ ಎಲ್ಲರಿಗೂ ಊಟ ಬಡಿಸಿ ಜೊತೆಗೆ ಹಾಡು ಹಾಡಿ, ಫೋಟೋ ತೆಗೆಸಿ ಹಿರಿಯ ನಟಿಗೆ ಖುಷಿ ಕೊಟ್ಟಿದ್ದಾರೆ.