ಗಂಡ-ಹೆಂಡತಿಯ ಜಗಳದ ನಡುವೆ ಬಂದ ಅತ್ತೆಗೆ ಬಿತ್ತು ಗೂಸಾ

ಶುಕ್ರವಾರ, 12 ಮಾರ್ಚ್ 2021 (09:28 IST)
ಬೆಂಗಳೂರು: ಗಂಡ-ಹೆಂಡತಿ ಜಗಳವಾಡುತ್ತಿದ್ದರೆ ಮೂರನೆಯವರು ಮೂಗು ತೂರಿಸಬಾರದು ಎಂದು ಸುಮ್ಮನೇ ಹೇಳಲ್ಲ. ಇಲ್ಲೊಬ್ಬ ಮಹಿಳೆಗೆ ಅದು ಸರಿಯಾಗಿಯೇ ಅನುಭವಕ್ಕೆ ಬಂದಿದೆ.


ಬಟ್ಟೆ ತೊಳೆಯುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿತ್ತು. ಇವರ ಮಧ್ಯೆ ಬಂದ ಅತ್ತೆಗೆ ಸೊಸೆ ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಅತ್ತೆಯನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಜೋಗಿಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಇದೀಗ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರು ಜಗಳವಾಡುತ್ತಿದ್ದಾಗ ಮಧ್ಯೆ ಸಮಾಧಾನ ಮಾಡಲು ಅತ್ತೆ ಬಂದಿದ್ದಳು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ