ಸ್ಯಾಂಡಲ್ ವುಡ್ ನಲ್ಲಿ ತ್ರಿಬಲ್ ಆರ್ ನಟಿಯರಿಗೆ ಈಗಲೂ ಬೇಡಿಕೆ
ರಕ್ಷಿತಾ ಪ್ರೇಮ್ ಮದುವೆಯಾದ ಮೇಲೆ ನಟನೆಗೆ ಗುಡ್ ಬೈ ಹೇಳಿ ಈಗ ನಿರ್ಮಾಪಕಿಯಾಗಿ ಮಿಂಚುತ್ತಿದ್ದಾರೆ. ಆದರೆ ರಮ್ಯಾ ಮತ್ತು ರಾಧಿಕಾ ಪಂಡಿತ್ ಹಲವಾರು ಸಮಯದಿಂದ ಸಿನಿಮಾ ಮಾಡಿಲ್ಲ.
ಹಾಗಿದ್ದರೂ ರಮ್ಯಾ, ರಾಧಿಕಾಗೆ ಈಗಲೂ ಅಭಿಮಾನಿಗಳು ಮತ್ತೆ ಯಾವಾಗ ಸಿನಿಮಾಗೆ ಬರ್ತೀರಾ ಎಂದು ಕೇಳುತ್ತಲೇ ಇರುತ್ತಾರೆ. ಈ ನಟಿಯರ ಮೇಲೆ ಅಭಿಮಾನಿಗಳಿಗೆ ಈಗಲೂ ಎಷ್ಟು ಕ್ರೇಜ್ ಇದೆ ಎಂದರೆ ಮತ್ತೆ ಇವರು ನಾಯಕಿಯಾಗಿ ಬಂದರೂ ಅವರನ್ನು ಮೊದಲಿನಂತೇ ಸ್ವೀಕರಿಸುವುದರಲ್ಲಿ ಅನುಮಾನವಿಲ್ಲ.