‘ಓಂ’ ಸಿನಿಮಾಗೆ 25 ವರ್ಷ: ಇಂದು ಶಿವಣ್ಣ ಅಭಿಮಾನಿಗಳಿಂದ ಹಬ್ಬ

ಸೋಮವಾರ, 18 ಮೇ 2020 (09:00 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಓಂ’. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 18 ವರ್ಷ.


ಈ ಸಂಭ್ರಮವನ್ನು ಶಿವಣ್ಣ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಚರಿಸಿಕೊಳ್ಳಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶದಲ್ಲಿ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿದ್ದರೆ, ಪ್ರೇಮಾ ನಾಯಕಿಯಾಗಿ ನಟಿಸಿದ್ದರು. ಶಿವಣ್ಣ ಮಚ್ಚು, ಲಾಂಗ್ ಹಿಡಿದ ಮೊದಲ ಸಿನಿಮಾ ಇದಾಗಿತ್ತು.

ಇಂದು ಶಿವಣ್ಣ ಅಭಿಮಾನಿಗಳು ಓಂ ಸಿನಿಮಾ 25 ನೇ ವರ್ಷದ ಸವಿನೆನಪಿಗಾಗಿ ಟ್ವಿಟರ್ ನಲ್ಲಿ ಟ್ರೆಂಡ್ ಆರಂಭಿಸಲಿದ್ದಾರೆ. ಇಂದು ಸಂಜೆ 7 ಗಂಟೆಯಿಂದ ನಾಳೆ ಸಂಜೆ 7 ಗಂಟೆಯವರೆಗೆ ಈ ಟ್ರೆಂಡ್ ಜಾರಿಯಲ್ಲಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ