ಸ್ಪಂದನಾ ಡಯಟ್ ಮಾಡ್ತಿರಲಿಲ್ಲ, ಹಾರ್ಟ್ ಪ್ರಾಬ್ಲಂ ಕೂಡಾ ಇರ್ಲಿಲ್ಲ
ಈ ಹಿಂದೆ ಆರೋಗ್ಯವಾಗಿದ್ದ ಪುನೀತ್ ರಾಜ್ ಕುಮಾರ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು ಎಲ್ಲರಿಗೂ ಅರಗಿಸಲಾಗದ ವಿಚಾರವಾಗಿತ್ತು. ಇದಕ್ಕೆ ಮೊದಲು ಚಿರಂಜೀವಿ ಸರ್ಜಾ ಕೂಡಾ ಇದೇ ರೀತಿ ಸಾವನ್ನಪ್ಪಿದ್ದರು. ಇದೀಗ ಸ್ಪಂದನಾ ಕೂಡಾ ಅದೇ ರೀತಿ ಹಠಾತ್ ಸಾವನ್ನಪ್ಪಿದ್ದಾರೆ.
ಅವರ ಮನೆಕೆಲಸದವರ ಹೇಳಿಕೆ ಪ್ರಕಾರ ಸ್ಪಂದನಾ ಮನೆ ಆಹಾರವನ್ನೇ ಸೇವಿಸುತ್ತಿದ್ದರು. ಡಯಟಿಂಗ್ ಮಾಡುತ್ತಿರಲಿಲ್ಲ. ಅವರಿಗೆ ಹೃದಯ ಸಂಬಂಧೀ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಹೀಗಿದ್ದರೂ ಅವರು ಹಠಾತ್ ಹೃದಯಾಘಾತಕ್ಕೊಳಗಾಗಿರುವುದು ಆಘಾತಕಾರಿಯಾಗಿದೆ. ಕುಟುಂಬದವರ ಜೊತೆ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಆದರೆ ಈ ವೇಳೆ ಪತಿ ವಿಜಯ್ ರಾಘವೇಂದ್ರ ಹಾಗೂ ಓರ್ವ ಪುತ್ರ ಜೊತೆಗಿರಲಿಲ್ಲ ಎನ್ನಲಾಗಿದೆ. ಮಗನ ಜೊತೆ ಕೊನೆಯದಾಗಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.