ಸ್ಪಂದನಾ ವಿಜಯ್ ರಾಘವೇಂದ್ರ ಉತ್ತರಾದಿಕ್ರಿಯೆ ಇಂದು
ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ನಿವಾಸದಲ್ಲಿ ಇಂದು ಶಾಂತಿ ಹೋಮ ನಡೆಯುತ್ತಿದೆ. ಅದಾದ ಬಳಿಕ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.
ಸ್ನೇಹಿತರು, ಕುಟುಂಬಸ್ಥರ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಲೋ ಬಿಪಿ ಮತ್ತು ಹೃದಯಾಘಾತದಿಂದಾಗಿ ಆಗಸ್ಟ್ 5 ರಂದು ಸಾವನ್ನಪ್ಪಿದ್ದರು. ಇದಾದ ಬಳಿಕ ಪತಿ ವಿಜಯ್ ರಾಘವೇಂದ್ರ, ಪುತ್ರ ಶೌರ್ಯ ಸೇರಿದಂತೆ ಕುಟುಂಬಸ್ಥರು ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜಿಸಿದ್ದರು. ಇದೀಗ ಉತ್ತರ ಕ್ರಿಯೆ ನಡೆಯಲಿದೆ.