ಸತ್ತ ಮಗನ ನೆನಪಲ್ಲಿ ಟಿಕೆಟ್ ಖರೀದಿಸಿ ಯುವರತ್ನ ವೀಕ್ಷಿಸಿದ ಕುಟುಂಬ

ಮಂಗಳವಾರ, 6 ಏಪ್ರಿಲ್ 2021 (07:27 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಈಗ ರಾಜ್ಯಾದ್ಯಂತ ಸುದ್ದಿ ಮಾಡಿದೆ. ಈ ಸಿನಿಮಾವನ್ನು ಇದೀಗ ವಿಶೇಷ ಕುಟುಂಬವೊಂದು ವೀಕ್ಷಿಸಿದೆ.


ಇತ್ತೀಚೆಗೆ ತೀರಿಕೊಂಡ ಮಗನ ನೆನಪಿನಲ್ಲಿ ಟಿಕೆಟ್ ಖರೀದಿಸಿದ ಕುಟುಂಬವೊಂದು ಆತನಿಗೂ ಆಸನ ಮೀಸಲಿರಿಸಿ ಸಿನಿಮಾ ವೀಕ್ಷಿಸಿದೆ. ಮೈಸೂರಿನ ದಂಪತಿ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಗಳು. ಅವರು ಇತ್ತೀಚೆಗೆ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದರು.

ಆದರೆ ಪುನೀತ್ ಅಪ್ಪಟ ಅಭಿಮಾನಿಗಳಾಗಿರುವ ಈ ದಂಪತಿ ತಮ್ಮ ತೀರಿಕೊಂಡ ಮಗನ ಫೋಟೋವನ್ನು ಆತನಿಗೆ ಮೀಸಲಿರಿಸಿದ ಆಸನದಲ್ಲಿ ಇರಿಸಿ ಸಿನಿಮಾ ವೀಕ್ಷಿಸಿದೆ. ಈ ಫೋಟೋವನ್ನು ಪುನೀತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ