ಡೈರೆಕ್ಟರ್ ಆದ ನಟಿ ಶ್ರೀಲೀಲಾ
ಮುದ್ದು ಮುದ್ದಾದ ಅಭಿನಯದಿಂದ ಪ್ರೇಕ್ಷಕರ ಮನಗೆಲ್ಲುವ ಬೆಡಗಿ ಶ್ರೀಲೀಲಾ ಈಗ ಬೈ ಟು ಲವ್ ಸಿನಿಮಾಗಾಗಿ ಡೈರೆಕ್ಟರ್ ಆಗಿದ್ದಾರೆ. ಇಂತಹದ್ದೊಂದು ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ನಾಯಕ ಧನ್ವೀರ್ ಅಭಿನಯಿಸಿರುವ ದೃಶ್ಯವೊಂದನ್ನು ಶ್ರೀಲೀಲಾ ಆಕ್ಷನ್ ಕಟ್ ಹೇಳಿ ನಿರ್ದೇಶನ ಮಾಡಿದ್ದಾರಂತೆ. ನಿರ್ದೇಶಕ ಹರಿ ಸಂತೋಷ್ ಪಕ್ಕದಲ್ಲೇ ಕುಳಿತುಕೊಂಡು ಶ್ರೀಲೀಲಾ ನಿರ್ದೇಶಕಿಯಾಗಿ ಕೆಲಸ ಮಾಡಿರುವ ದೃಶ್ಯಗಳು ಈಗ ವೈರಲ್ ಆಗಿದೆ.