ಮತ್ತೆ ಕನ್ನಡ ಸಿನಿಮಾದಲ್ಲಿ ಮಾದಕ ತಾರೆ ಸನ್ನಿ ಲಿಯೋನ್

ಗುರುವಾರ, 25 ಮಾರ್ಚ್ 2021 (09:51 IST)
ಬೆಂಗಳೂರು: ಲವ್ ಯೂ ಅಲಿಯಾ, ಡಿಕೆ ಬೋಸ್ ಸಿನಿಮಾ ನಂತರ ಮಾದಕ ತಾರೆ ಸನ್ನಿ ಲಿಯೋನ್ ಮತ್ತೆ ಕನ್ನಡ ಸಿನಿಮಾವೊಂದಕ್ಕೆ ಬರಲಿದ್ದಾರೆ.


ಸಚಿನ್ ಧನಪಾಲ್-ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ಚಾಂಪಿಯನ್’ ಸಿನಿಮಾದಲ್ಲಿ ಸನ್ನಿ ಲಿಯೋನ್ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರುತ್ತಿದ್ದಾರಂತೆ. ಈ ಮೂಲಕ ಮಾದಕ ತಾರೆ ಕೆಲವು ಸಮಯದ ಬ್ರೇಕ್ ನ ನಂತರ ಕನ್ನಡಕ್ಕೆ ಬರುತ್ತಿದ್ದಾರೆ.

ಈ ಹಾಡಿನ ಐಟಂ ಹಾಡೊಂದಕ್ಕೆ ಸನ್ನಿ ಸಖತ್ ಗ್ಲಾಮರಸ್ ಆಗಿ ಹೆಜ್ಜೆ ಹಾಕಲಿದ್ದಾರೆ. ತೆರೆಯ ಮೇಲೆ ಮಾದಕ ಪಾತ್ರ ಮಾಡಿದರೂ ನಿಜ ಜೀವನದಲ್ಲಿ ಅನೇಕ ಸಾಮಾಜಿಕ ಕೆಲಸ ಮಾಡುವ ಮೂಲಕ ಸನ್ನಿ ಬೆಂಗಳೂರಿನಲ್ಲೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ