ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಕಡೆಯಿಂದ ವಿಶೇಷ ಆಫರ್

ಶುಕ್ರವಾರ, 21 ಸೆಪ್ಟಂಬರ್ 2018 (16:35 IST)
ಬೆಂಗಳೂರು: ಅಪ್ಪನ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸಾಪ್ ಮಾಡಿದರೆ ಅವರಿಗೆ ನಟ ಕಿಚ್ಚ ಸುದೀಪ್ ಕಡೆಯಿಂದ ವಿಶೇಷ ಉಡುಗೊರೆ ಸಿಗಲಿದೆ.


ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯಿಸಿದ ‘ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ’ ಇದೇ ತಿಂಗಳು 27ರಂದು ಬಿಡುಗಡೆಯಾಗಲಿದೆ. ಈ ವೇಳೆ ಚಿತ್ರತಂಡ ಅಭಿಮಾನಿಗಳಿಗೆ ತಮ್ಮ ತಂದೆ ಜೊತೆಯಿರುವ ಫೋಟೋ ವಾಟ್ಸಾಪ್ ಮೂಲಕ ಕಳುಹಿಸಿ ತಮ್ಮ ಜೊತೆ ಚಿತ್ರವನ್ನು ವೀಕ್ಷಿಸಿ ಎಂಬ ಆಫರ್ ನೀಡಿದೆ.


ಅಭಿಮಾನಿಗಳು ಅಪ್ಪನ ಜೊತೆ ತೆಗೆದುಕೊಂಡ ಸೆಲ್ಫಿ ಫೋಟೋವನ್ನು 96637 50657 ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ವಾಟ್ಸಾಪ್ ಮೂಲಕ ಕಳುಹಿಸಿದ ಫೋಟೋಗಳಲ್ಲಿ 250 ಫೋಟೋವನ್ನು ಆಯ್ಕೆ ಮಾಡಲಾಗುತ್ತದೆಯಂತೆ.
ಇದರಲ್ಲಿ ಆಯ್ಕೆಯಾದ ಅಪ್ಪ- ಮಗ ಅಥವಾ ಮಗಳು ಚಿತ್ರತಂಡ ಹಾಗೂ ಸುದೀಪ್ ಜೊತೆ ಚಿತ್ರ ನೋಡಬಹುದು. ಹಾಗೂ  ಕಿಚ್ಚ ಸುದೀಪ್ ಅವರ ಆಟೋಗ್ರಾಫ್ ಕೂಡ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ