ರತ್ನಮಂಜರಿಯಲ್ಲಿ ಕೊನೇ ಸಲ ಕಾಣಿಸಿಕೊಂಡಿದೆ ತಲಕಾವೇರಿ!

ಶನಿವಾರ, 11 ಮೇ 2019 (18:08 IST)
ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರ ಇದೇ ತಿಂಗಳ ಹದಿನೇಳನೇ ತಾರೀಕಿನಂದು ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಈಗಾಗಲೇ ಟ್ರೈಲರ್ ಮುಂತಾದವುಗಳ ಮೂಲಕ ಇದೊಂದು ವಿಭಿನ್ನ ಸಿನಿಮಾ ಎಂಬ ಸಂದೇಶವೂ ಕೂಡಾ ಪ್ರೇಕ್ಷಕರತ್ತ ರವಾನೆಯಾಗಿ ನಿರೀಕ್ಷೆಗಳೂ ಕೂಡಾ ಮತ್ತಷ್ಟು ತೀವ್ರಗೊಂಡಿದೆ.
ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ನಿರ್ಮಾಣದ ಈ ಚಿತ್ರದಲ್ಲಿ ರಾಜ್ ಚರಣ್ ಅವರಿಗೆ ಮೂವರು ನಾಯಕಿಯರು ಜೊತೆಯಾಗಿ ನಟಿಸಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿ ರಾಜು ಮತ್ತು ಶ್ರದ್ಧಾ ಸಾಲಿಯಾನ್ ನಾಯಕಿಯರಾಗಿ ವಿಶೇಷವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದು ಸಿನಿಮಾ ನಾಯಕಿಯರೆಂದರೆ ಸಿದ್ಧ ಸೂತ್ರದ ಪಾತ್ರಗಳು ಕಣ್ಮುಂದೆ ಮೂಡಿ ಬರುತ್ತವೆ. ಆದರೆ ರತ್ನಮಂಜರಿಯಲ್ಲಿ ಈ ನಾಯಕಿಯರ ಪಾತ್ರಗಳೂ ಕೂಡಾ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡುತ್ತಾ ಬೇರೆಯದ್ದೇ ಲೋಕದಲ್ಲಿ ಯಾನ ಮಾಡಿಸಲಿವೆಯಂತೆ.
ಈ ಚಿತ್ರದಲ್ಲಿ ಕಥೆ ಮತ್ತು ಪಾತ್ರಗಳು ಹೇಗೆ ಭಿನ್ನವಾಗಿವೆಯೋ, ಚಿತ್ರೀಕರಣಕ್ಕೆ ಆಯ್ದುಕೊಂಡಿರೋ ಲೊಕೇಷನ್ನುಗಳೂ ಕೂಡಾ ಅಷ್ಟೇ ವಿಶೇಷವಾಗಿವೆಯಂತೆ. ಹೆಚ್ಚಾಗಿ ಚಿತ್ರೀಕರಣ ನಡೆದಿರೋ ಪ್ರದೇಶಗಳಲ್ಲಿಯೇ ಯಾರೂ ಕಾಣಿಸಿರದ ಅದ್ಭುತಗಳನ್ನು ಇಲ್ಲಿ ಸೆರೆ ಹಿಡಿಯಲಾಗಿದೆ. ಕೊಡಗಿನ ತಲಕಾವೇರಿಯನ್ನೂ ಕೂಡಾ ಅಷ್ಟೇ ವಿಶೇಷವಾಗಿ ತೋರಿಸಲಾಗಿದೆಯಂತೆ.
ತಲಕಾವೇರಿಯ ಚಿತ್ರೀಕರಣ ನಡೆಸಿದ ವಾರತದೊಪ್ಪತ್ತಿನಲ್ಲಿಯೇ ಇನ್ನು ಮುಂದೆ ಇಲ್ಲಿ ಚಿತ್ರೀಕರಣ ನಡೆಸುವಂತಿಲ್ಲವೆಂಬ ಆದೇಶ ರಾಜ೯ಯ ಸರ್ಕಾರದಿಂದ ಹೊರ ಬಿದ್ದಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ತಲಕಾವೇರಿಯನ್ನು ಕಡೇಯ ಬಾರಿ ಚಿತ್ರೀಕರಿಸಿದ ಚಿತ್ರವಾಗಿಯೂ ರತ್ನಮಂಜರಿ ದಾಖಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ