ಅ. 30ರಂದು ‘ಸೂರಾರೈ ಪೊಟ್ರು’ ಸಿನಿಮಾ ಬಿಡುಗಡೆಗೆ ಎದುರಾಗಿದೆ ಈ ಸಂಕಟ

ಶನಿವಾರ, 24 ಅಕ್ಟೋಬರ್ 2020 (10:54 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ ನಟ ಸೂರ್ಯ ಅಭಿನಯದ ‘ಸೂರಾರೈ ಪೊಟ್ರು’ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಹೌದು ನಟ ಸೂರ್ಯ ಅಭಿನಯದ ‘ಸೂರಾರೈ ಪೊಟ್ರು’ ಚಿತ್ರದಲ್ಲಿ ಕಾಣಿಸಿಕೊಂಡ ಮೂರು ಹಾಡುಗಳು ಮತ್ತು 2ನೇ ಟ್ರೈಲರ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ . ಹಾಗೇ ಈ ಸಿನಿಮಾ ಅಕ್ಟೋಬರ್ 30ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದರೆ ಈ ಸಿನಿಮಾ ಬಿಡುಗಡೆಗೆ ಸಮಸ್ಯೆಯೊಂದು ಎದುರಾಗಿದೆಯಂತೆ.

ಅದೇನೆಂದರೆ ಈ ಚಿತ್ರದಲ್ಲಿ ಭಾರತೀಯ ವಾಯುಪಡೆಯ ಬಗ್ಗೆ ಚಿತ್ರಸಲಾಗಿದ್ದು, ಇದರ ತುಣುಕನ್ನು ಬಿಡುಗಡೆ ಮಾಡಲು ಭಾರತೀಯ ವಾಯುಪಡೆಯ ಅನುಮತಿ ಪಡೆಯಬೇಕು. ಆದಕಾರಣ ಅ.25ರೊಳಗೆ ಅನುಮತಿ ಸಿಕ್ಕರೆ ಅಕ್ಟೋಬರ್ 30ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದಕಾರಣ ಇಲ್ಲಿಯವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ