ಈ ದಿನ ನಟ ಸುದೀಪ್ ಜೀವನದಲ್ಲಿ ಮರೆಯಲಾಗದ ದಿನವಂತೆ. ಯಾಕೆ ಗೊತ್ತಾ?

ಸೋಮವಾರ, 9 ಜುಲೈ 2018 (18:25 IST)
ಬೆಂಗಳೂರು : ಸ್ಯಾಂಡಲ್ ವುಡ್  ನಟ ಕಿಚ್ಚ ಸುದೀಪ್ ಅವರು ಜುಲೈ 6 ತಮ್ಮ ಜೀವನದಲ್ಲಿ ಮರೆಯಲಾಗದ ದಿನವಾಗಿದೆ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.


ಯಾಕೆಂದರೆ ಜುಲೈ 6 ಸುದೀಪ್ ಅವರ ಸಿನಿಮಾ ಜೀವನದಲ್ಲಿ ಎರಡು ರೀತಿಯಲ್ಲಿ ತಿರುವು ಕಂಡ  ದಿನವಾಗಿದ್ದರಿಂದ ಅವರು ಈ ದಿನವನ್ನು ಈಗ ಸ್ಮರಿಸಿದ್ದಾರೆ. ಒಂದು ಜುಲೈ 6 2001 ರಲ್ಲಿ ಸುದೀಪ್ ನಟನಾಗಿ ಅಭಿನಯ ಮಾಡಿದ `ಹುಚ್ಚ' ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾದ ಮೂಲಕವೇ ಅವರು ಸ್ಯಾಂಡಲ್‍ ವುಡ್ ನಲ್ಲಿ ಭರವಸೆಯ ನಟನಾಗಿ ಪರಿಚಯಗೊಂಡಿದ್ದರು.


ಅದೇ ರೀತಿ ಸುದೀಪ್ ಟಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದ `ಈಗ' ಚಿತ್ರ ಕೂಡ 2012 ಜುಲೈ 6 ರಂದೇ ಬಿಡುಗಡೆಗೊಂಡಿತ್ತು. `ಈಗ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸ್ಟಾರ್ ಟಾಲಿವುಡ್ ನಲ್ಲಿಯೂ ಮಿಂಚಿದ್ದರು.


ಆದ್ದರಿಂದ ಈ ದಿನವನ್ನು ಸ್ಮರಿಸಿ ಸುದೀಪ್ ಅವರು ಟ್ವೀಟರ್ ನಲ್ಲಿ, ‘ಹುಚ್ಚ' ಮತ್ತು `ಈಗ' ಎರಡು ಸಿನಿಮಾದ ತಂಡದವರಿಗೆ ಧನ್ಯವಾದಗಳು. ಈ ದಿನ ನನಗೆ ಬಹಳ ವಿಶೇಷವಾಗಿದ್ದು, ಒಬ್ಬ ನಟನಾಗಿ ನನ್ನನ್ನು ಪರಿಚಯಿಸಿದ ದಿನವಾಗಿದೆ. ಜೊತೆಗೆ ಅಭಿಮಾನಿಗಳು ತಮ್ಮ ಮನದಲ್ಲಿ ಇರಿಸಿಕೊಂಡಿದ್ದಾರೆ. ಆದ್ದರಿಂದ ಜುಲೈ 6 ನನ್ನ ಜೀವನದಲ್ಲಿ ಒಂದು ವಿಶೇಷ ದಿನವಾಗಿದೆ' ಎಂದು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ