ಗುರುಪ್ರಸಾದ್ ನಿರ್ದೇಶನದ ಸಿನಿಮಾ ಬಿಡುಗಡೆಗೆ ಸ್ಟೇ ತಂದ ಪತ್ನಿ ಸುಮಿತ್ರಾ, ಕಾರಣ ಹೀಗಿದೆ

Sampriya

ಗುರುವಾರ, 20 ಫೆಬ್ರವರಿ 2025 (15:23 IST)
Photo Courtesy X
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ನಟಿಸಿ ನಿರ್ದೇಶನ ಮಾಡಿರುವ ಎದ್ದೇಳು ಮಂಜುನಾಥ್ 2 ಸಿನಿಮಾ ರಿಲೀಸ್‌ಗೆ ಅವರ ಪತ್ನಿ ಸುಮಿತ್ರಾ ಅವರು ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ. ಇದೀಗ  ಸಿನಿಮಾ ಬಿಡುಗಡೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಮೈಸೂರು ರಮೇಶ್ ಮತ್ತು ರವಿ ದೀಕ್ಷಿತ್ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾ ನಾಳೆ ಬಿಡುಗಡೆಗೆ  ಸಿದ್ದವಾಗಿತ್ತು. ಇದೀಗ ಹಣದ ವಿಚಾರವಾಗಿ ಗುರುಪ್ರಸಾದ್ ಅವರ ಹೆಂಡ್ತಿ ಸ್ಟೇ ತಂದಿದ್ದಾರೆ.

ಈ ಬಗ್ಗೆ ನಿರ್ಮಾಪಕ ರಮೇಶ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ,  ಸಿನಿಮಾದಿಂದ ಬರುವ ಲಾಭದಿಂದ ಶೇ.50 ರಷ್ಟು ಹಣವನ್ನು ಗುರುಪ್ರಸಾದ್ ಕುಟುಂಬಕ್ಕೆ ನೀಡುವುದಾಗಿ ಹೇಳಿದ್ದೆವು. ಆದರೆ ಅವರ ಪತ್ನಿ ಸುಮಿತ್ರಾ ಸಿನಿಮಾ ಬಿಡುಗಡೆಗೂ ಮುನ್ನ ₹4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಅವರಿಗೆ ಹಣ ನೀಡದಕ್ಕೆ ತಡೆಯಾಜ್ಞೆ ನೀಡಿದ್ದಾರೆ ಎಂದು ಹೇಳಿದರು.

ಸಿನಿಮಾದ ಕಥೆ, ಚಿತ್ರಕಥೆ ಎಲ್ಲಾ ನನ್ನ ಪತಿಯದ್ದು. ಆದರೆ ಸಿನಿಮಾ ಮುಗಿದ ಮೇಲೆ 51% ರಷ್ಟು ಲಾಭ ತೆಗೆದುಕೊಳ್ಳಿ ಎಂದು ಹೇಳಿದರು. ನಮ್ಮ ಮಗುವಿನ ಮುಂದಿನ ಭವಿಷ್ಯಕ್ಕೆ ನಾನೇನು ಮಾಡಲಿ. ಸಿನಿಮಾ ಆಡಿಯೋ ರಿಲೀಸ್ ವೇಳೆಯೇ ನನಗೆ ಈ ವಿಚಾರ ಗೊತ್ತಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ