ಟಾಲಿವುಡ್ ನ ನಿರ್ಮಾಪಕ ಸಂದೀಪ್ ಕೋರಿಟಾಲಾ ನಿಧನ

ಸೋಮವಾರ, 1 ಮಾರ್ಚ್ 2021 (12:15 IST)
ಹೈದರಾಬಾದ್ : ಟಾಲಿವುಡ್ ನ ನಿರ್ಮಾಪಕ ಸಂದೀಪ್ ಕೋರಿಟಾಲಾ ಹೃದಯಾಘಾತದಿಂದ ಭಾನುವಾರ ಬೆಳಿಗ್ಗೆ  ನಿಧನರಾಗಿದ್ದಾರೆ.

ನಿರ್ಮಾಪಕ ಸಂದೀಪ್ ಕೋರಿಟಾಲಾ  ಅವರು ಜನಪ್ರಿಯ ಚಿತ್ರಗಳಾದ ಸ್ವಾಮಿ ರಾರಾ, ವೀದು ಥೀಡಾ ಮತ್ತು ರೌಡಿ ಫೆಲೋ ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದಾರೆ. ಇವರ ನಿಧನಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅವರ ಸಾವಿನ ಬಗ್ಗೆ ನಟ ನಾರಾ ರೋಹಿತ್ ಅವರು ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಗುಂಟೂರು ಜಿಲ್ಲೆಯ ಬಾಪಟ್ಲಾದಲ್ಲಿ ಸಂದೀಪ್ ಅವರ ತವರೂರಾದ ಪೂಂಡ್ಲಾದಲ್ಲಿ ನಡೆಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ