‘ನಾಂದಿ’ ಚಿತ್ರದ ರಿಮೇಕ್ ಹಕ್ಕು ಖರೀದಿಸಿದ ನಿರ್ಮಾಪಕ ದಿಲ್ ರಾಜು

ಸೋಮವಾರ, 1 ಮಾರ್ಚ್ 2021 (09:32 IST)
ಹೈದರಾಬಾದ್ : ಅಲ್ಲಾರಿ ನರೇಶ್ ಮತ್ತು ವರಲಕ್ಷ್ಮಿ ಶರತ್ ಕುಮಾರ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ‘ನಾಂದಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

ಆದರೆ ಇತ್ತೀಚಿನ ವರದಿಯ ಪ್ರಕಾರ ನಿರ್ಮಾಪಕ ದಿಲ್ ರಾಜು ಅವರು ನಾಂದಿ ಚಿತ್ರದ ರಿಮೇಕ್ ಹಕ್ಕುನ್ನು ಖರೀದಿಸಿದ್ದಾರೆ. ಮತ್ತು ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಮಾಡಲು ಯೋಜಿಸುತ್ತಿದ್ದಾರೆ.

ನಾಂದಿ ಚಿತ್ರದ ರಿಮೇಕ್ ಹಕ್ಕುಗಳನ್ನು ದಿಲ್ ರಾಜು 4 ಭಾಷೆಗಳಲ್ಲಿ ಸುಮಾರು 2.75ಕೋಟಿ ರೂ.ಗೆ ಖರೀದಿ ಮಾಡಿದ್ದಾರಂತೆ. ನಾಂದಿ ಚಿತ್ರವನ್ನು ಗಿಂದಿಯಲ್ಲಿ ರಿಮೇಕ್ ಮಾಡಲು ದಿಲ್ ರಾಜು ಬಾಲಿವುಡ್ ನ ಜನಪ್ರಿಯ ಪ್ರೊಡಕ್ಷನ್ ಹೌಸ್ ನೊಂದಿಗೆ ಸಹಕರಿಸಲು ಯೋಜಿಸುತ್ತಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ