ವಕೀಲ್ ಸಾಬ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡ ಅಮೆಜಾನ್ ಪ್ರೈಮ್

ಸೋಮವಾರ, 1 ಮಾರ್ಚ್ 2021 (10:02 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ನಟನಾ ಕ್ಷೇತ್ರಕ್ಕೆ ‘ವಕೀಲ್ ಸಾಬ್’ ಚಿತ್ರದ ಮೂಲಕ ಪುನರಾಗಮನ ಮಾಡುತ್ತಿದ್ದಾರೆ. ಇದು ಪಿಂಕ್ ಚಿತ್ರದ ರಿಮೇಕ್ ಆಗಿದ್ದು, ಏಪ್ರಿಲ್ 9ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎನ್ನಲಾಗಿದೆ.

ಚಿತ್ರದ ನಿರ್ಮಾಪಕರು ಈಗಾಗಲೇ ವಕೀಲ್ ಸಾಬ್ ಚಿತ್ರದ ಹಕ್ಕುಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದ್ದಾರೆ. ಈ ಚಿತ್ರದ ಡಿಜಿಟಲ್  ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದ್ದು, ಮೇ ತಿಂಗಳ ಕೊನೆಯ ವಾರದಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ. ಹಾಗೇ ಚಿತ್ರ ಬಿಡುಗಡೆಯಾದ 50 ದಿನಗಳ ಬಳಿಕ ಪ್ರಸಾರ ಮಾಡುವಂತೆ ಅಮೆಜಾನ್ ಪ್ರೈಮ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ