ಮುಂದಿನ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಶೂಟಿಂಗ್ ಶುರು

ಬುಧವಾರ, 25 ಡಿಸೆಂಬರ್ 2019 (08:07 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ಕ್ಕೆ ಶೂಟಿಂಗ್ ಗೆ ಮುಂದಿನ ವರ್ಷ ಮುಹೂರ್ತ ಫಿಕ್ಸ್ ಆಗಿದೆ.


ಐ ಲವ್ ಯೂ ಸಿನಿಮಾ ಯಶಸ್ಸಿನ ಬಳಿಕ ಉಪೇಂದ್ರ-ನಿರ್ದೇಶಕ ಆರ್. ಚಂದ್ರು ಜೋಡಿಯ ಮತ್ತೊಂದು ಸಿನಿಮಾ ಇದು. ಈಗಾಗಲೇ ಫೋಟೋ ಶೂಟ್ ಮೂಲಕ ಇದೊಂದು ಅಂಡರ್ ವರ್ಲ್ಡ್ ಕುರಿತಾದ ಸಿನಿಮಾ ಎಂಬ ಸುಳಿವು ಚಿತ್ರತಂಡ ನೀಡಿದೆ.

ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಈಗಾಗಲೇ ಮುಗಿದಿದ್ದು, ಮುಂದಿನ ವರ್ಷ ಅಂದರೆ ಜನವರಿ ಆರಂಭದ ವಾರದಲ್ಲಿ ಶೂಟಿಂಗ್ ಆರಂಭಿಸುವುದಾಗಿ ಚಿತ್ರತಂಡ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ