ಉಪ್ಪೇನಾ ಚಿತ್ರದ ಬಳಿಕ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ ನಟ ವೈಷ್ಣವ್ ತೇಜ್

ಭಾನುವಾರ, 28 ಫೆಬ್ರವರಿ 2021 (12:30 IST)
ಹೈದರಾಬಾದ್ : ವೈಷ್ಣವ್ ತೇಜ್ ಅವರು ಉಪ್ಪೇನಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಗಿದೆ. ಈಗ ವೈಷ್ಣವ್ ತೇಜ್ ಅವರು ತಮ್ಮ ಸಂಭಾವನೆಯನ್ನು  ಹೆಚ್ಚಿಸಿದ್ದಾರಂತೆ.

ವೈಷ್ಣವ್ ತೇಜ್ ಅವರು ತಮ್ಮ ಚೊಚ್ಚಲ ಚಿತ್ರ ಉಪ್ಪೇನಕ್ಕಾಗಿ 50ಲಕ್ಷ ರೂ ಸಂಭಾವನೆ ಪಡೆದಿದ್ದಾರಂತೆ. ಆದರೆ ಅವರ ಮುಂದಿನ ಚಿತ್ರ ಕೃಷ್ಣ ನಿರ್ದೇಶನದ ಚಿತ್ರಕ್ಕಾಗಿ ಅವರು 75ಲಕ್ಷ ರೂ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇತ್ತೀಚಿನ  ವರದಿ ಪ್ರಕಾರ ವೈಷ್ಣವ್ ಅವರು ತಮ್ಮ ಮೂರನೇ ಚಿತ್ರಕ್ಕೆ 2.50ಕೋಟಿಗಳಷ್ಟು ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ