ಫ್ಯಾಮಿಲಿ ಸಿನಿಮಾಗಳಿಗೆ ನೋ ಅಂತಿದ್ದಾರಂತೆ ವಿಜಯ್ ದೇವರಕೊಂಡ

ಸೋಮವಾರ, 24 ಜನವರಿ 2022 (08:51 IST)
ಹೈದರಾಬಾದ್: ವಿಜಯ್ ದೇವರಕೊಂಡ ಈಗ ಕೇವಲ ಟಾಲಿವುಡ್ ಗೆ ಮಾತ್ರ ಸೀಮಿತವಾಗಿಲ್ಲ. ಅವರಿಗೆ ಬೇರೆ ಭಾಷೆಗಳಲ್ಲೂ ಫ್ಯಾನ್ ಫಾಲೋಯಿಂಗ್ ಇದ್ದಾರೆ.

ಅದರಲ್ಲೂ ಲೈಗರ್ ಸಿನಿಮಾ ಮಾಡುತ್ತಿರುವ ವಿಜಯ್ ಪಕ್ಕಾ ಆಕ್ಷನ್ ಹೀರೋ ಆಗುತ್ತಿದ್ದಾರೆ. ಹೀಗಾಗಿ ಅವರಿಗೆ ಈಗ ಮೊದಲಿನಂತೆ ಫ್ಯಾಮಿಲಿ ಸೆಂಟಿಮೆಂಟ್ ಇರುವ ಕತೆಗಳಿಗೆ ಸೀಮಿತವಾಗಲು ಇಷ್ಟವಿಲ್ಲವಂತೆ.

ಇದೇ ಕಾರಣಕ್ಕೆ ಈಗಾಗಲೇ ಒಪ್ಪಿಕೊಂಡಿದ್ದ ಒಂದು ಪ್ರಾಜೆಕ್ಟ್ ಕೈ ಬಿಟ್ಟಿದ್ದಾರೆ ಎಂಬ ಸುದ್ದಿಯಿದೆ. ಸದ್ಯಕ್ಕೆ ತಮಗೆ ಸಿನಿಮಾ ಮಾಡುವುದಿದ್ದರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿರಬೇಕೆಂಬುದು ವಿಜಯ್ ಯೋಚನೆಯಂತೆ. ಅದೇ ಕಾರಣಕ್ಕೆ ಅಂತಹ ಕತೆಗಳಿಗೇ ಹುಡುಕಾಟ ನಡೆಸುತ್ತಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ